Publish Date: Fri, 09 Jul 2021 (18:43 IST)
Updated Date: Fri, 09 Jul 2021 (18:45 IST)
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಶುಭ ಶುಕ್ರವಾರ ಹಾಗೂ ಅಮಾವಸ್ಯೆ ದಿನವಾದ ಇಂದು ಭೇಟಿ ನೀಡಿದ ಗೊರವಯ್ಯಾ ಸಿಹಿ ಸುದ್ದಿ ನೀಡಿದೆ.
ಬೆಂಗಳೂರಿನ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ ಇಬ್ಬರು ಗೊರವಯ್ಯಾ ತಲಾ 1 ಸಾವಿರ ರೂ. ನೀಡುವಂತೆ ಹೇಳಿದರು.
ಒಂದು ಸಾವಿರ ರೂಪಾಯಿ ನೋಟು ಪಡೆಯುತ್ತಿದ್ದಂತೆ ಮುಂದಿನ ಸಿಎಂ ನೀವೇ ಆಗ್ತಿರಾ ಎಂದು ಹೇಳಿ ಭವಿಷ್ಯ ನುಡಿದು ಆಶೀರ್ವಾದ ನೀಡಿದರು.