Select Your Language

Notifications

webdunia
webdunia
webdunia
webdunia

ಚಪ್ಪಡಿ ಕಲ್ಲು ಬಿದ್ದು ಬಾಲಕ ಸಾವು

webdunia
bangalore , ಶುಕ್ರವಾರ, 9 ಜುಲೈ 2021 (18:31 IST)
ಪಾಳು ಬಿದ್ದ ಮನೆ ಮೇಲೆ ಹತ್ತಲು ಹೋಗಿದ್ದ ವೇಳೆ ಚಪ್ಪಡಿ ಕಲ್ಲು ಮೇಲೆ ಬಿದ್ದು ಬಾಲಕನೋರ್ವ ಸಾವನ್ನಪ್ಪಿದ ದಾರುಣ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮೈಲಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 13 ವರ್ಷದ ಗೌತಮ್ ಮೃತ ಬಾಲಕ. ಮೈಲಪನಹಳ್ಳಿ ಗ್ರಾಮ ಹೊರಹೊಲಯದ ಕಂದವಾರ ಕೆರೆಯ ಬಳಿ ಇರುವ ತನ್ನ ಹೊಲದ ಬಳಿ ಆಟವಾಡಲು ಹೋಗಿದ್ದ ವೇಳೆ ಸಮೀಪದ ಹಳೆಯ ಮನೆ ಮೇಲೆ ಚಪ್ಪಡಿ ಕಲ್ಲು ಹಿಡಿದು ಹತ್ತಲು ಹೋದಾಗ ಕಾಲು ಜಾರಿ ಬಿದ್ದಿದ್ದಾನೆ.
ಇತ್ತೀಚಿಗೆ ಮಳೆ ಬಿದ್ದಿರುವ ಕಾರಣ ಚಪ್ಪಡಿ ಕಲ್ಲು ಕಿತ್ತು ಬಂದು ಕೆಳಗೆ ಬಿದ್ದ ಗೌತಮ್ ಮೇಲೆ ಬಿದ್ದಿದೆ. ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಗಮನಿಸಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿ ಬಿಟ್ಟು ಹೋಗಿದ್ದಕ್ಕೆ ಅರ್ಚಕ ಆತ್ಮಹತ್ಯೆ