ಬೆಂಗಳೂರು ನಗರವನ್ನು ಸ್ವಚ್ಛ ಸುಂದರ ನಗರವನ್ನಾಗಿಡುವ ನಿಟ್ಟಿನಲ್ಲಿ ಶ್ರಮವಹಿಸಿ ಕಾರ್ಯನಿರ್ವಹಿಸುವ ಸ್ವಚ್ಛತಾ ಯೋಧರಾದ ಪೌರಕಾರ್ಮಿಕರ ಶ್ರಮವನ್ನು ಗುರುತಿಸಿ ಬಿ-ಪ್ಯಾಕ್ ಸಂಸ್ಥೆಯು ಸಿಹಿ ವಿತರಿಸುತ್ತಿದ್ದಾರೆ. ಅದರ ಭಾಗವಾಗಿ ಈ ವರ್ಷವೂ ನಗರದಲ್ಲಿರುವ ಪೌರಕಾರ್ಮಿಕರು, ಆಟೋ-ಟಿಪ್ಪರ್, ಕಾಂಪ್ಯಾಕ್ಟರ್ ಗಳ ಚಾಲಕ-ಸಿಬ್ಬಂದಿ ಹಾಗೂ ಘನತ್ಯಾಜ್ಯ ನಿರ್ವಹಣೆಯ ಸಿಬ್ಬಂದಿಗಳು ಸೇರಿದಂತೆ ಸುಮಾರು 28,000 ಪೌರಕಾರ್ಮಿಕರ ಸಿಬ್ಬಂದಿಗೆ ದೀಪಾವಳಿ ಹಬ್ಬದ ಅಂಗವಾಗಿ ಸಿಹಿ ತಿನಿಸು ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದಾರೆ.
ಬಿ-ಪ್ಯಾಕ್ ಸಂಸ್ಥೆಯ ವತಿಯಿಂದ ಸಿಹಿ ತಿನಿಸು ವಿತರಣೆಯನ್ನು 243 ವಾರ್ಡಿನ ಪೌರಕಾರ್ಮಿಕರಿಗೆ ಹಂಚಿಕೆ ಮಾಡುವ ಕಾರ್ಯಕ್ರಮದ ಭಾಗವಾಗಿ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ಇಂದು ಪಾಲಿಕೆಯ ಕೇಂದ್ರ ಕಛೇರಿ ಆವರಣದ ಕೌನ್ಸಿಲ್ ಕಟ್ಟಡದ ಮುಂಭಾಗದಲ್ಲಿ ಸಾಂಕೇತಿಕವಾಗಿ ಸಂಪಂಗಿರಾಮನಗರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಸಿಹಿ ತಿನಿಸು ವಿತರಿಸಿದರು.
ಈ ವೇಳೆ ಬಿ.ಕ್ಲಿಪ್ ಕಾರ್ಯಕ್ರಮ ಮುಖ್ಯಸ್ಥರಾದ ರಾಘವೇಂದ್ರ ಹೆಚ್ ಎಸ್, ಸಂಪಂಗಿರಾಮನಗರ ಬಿ.ಕ್ಲಿಪ್ ನಾಯಕರಾದ ಪ್ರೇಮ್ ಕುಮಾರ್, ವಿನೋದ್ ಸಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.