ಬೆಂಗಳೂರು: ವಿಧಾನ ಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹೊಸ ಸಂಪ್ರದಾಯವನ್ನು ಹುಟ್ಟುಹಾಕಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಇದಕ್ಕೆ ಕಾರಣವೆನೆಂದರೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ನಿವೃತ್ತ ವಿಧಾನಸಭೆ ಕಾರ್ಯದರ್ಶಿಯಾದ ಓಂ ಪ್ರಕಾಶ್ ಅವರನ್ನ ತಮ್ಮ ಸಲಹೆಗಾರನಾಗಿ ನೇಮಿಸಿಕೊಂಡಿದ್ದಾರೆ. ವಿಧಾನಸಭೆ ಇತಿಹಾಸದಲ್ಲೇ ಇದೇ ಮೊದಲಬಾರಿಗೆ ಈ ರೀತಿ ಆಗಿದೆ ಎನ್ನಲಾಗಿದೆ.
ನಿವೃತ್ತ ಕಾರ್ಯದರ್ಶಿಯನ್ನ ನೇಮಿಸಿಕೊಂಡಿದ್ದಕ್ಕೆ ಸ್ಪೀಕರ್ ವಿರುದ್ಧ ವಿಧಾನಸಭೆ ಸಚಿವಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸ್ಪೀಕರ್ ದುಂದುವೆಚ್ಚ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ.