ನೌಕಾಪಡೆಯ ಗಸ್ತು ಹಡಗು ಐಎನ್‌ಎಸ್ ಸುಮೇಧಾದಲ್ಲಿ ದುರ್ಘಟನೆ

Webdunia
ಸೋಮವಾರ, 25 ಮೇ 2020 (21:08 IST)
ಭಾರತೀಯ ನೌಕಾಪಡೆಯ ಗಸ್ತು ಹಡಗು ‘ಐ.ಎನ್.ಎಸ್ ಸುಮೇಧಾ’ದಲ್ಲಿ ದುರ್ಘಟನೆ ಸಂಭವಿಸಿದೆ.

ಇಂಜಿನ್‌ನ ಫ್ಲೈವೀಲ್ ತುಂಡಾಗಿ ಸಿಡಿದು ಗಂಭೀರವಾಗಿ ಗಾಯಗೊಂಡಿದ್ದ ನೌಕಾಪಡೆ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ.

ಹಡಗಿನ ಎಂಜಿನ್ ರೂಂ ಆರ್ಟಿಫೈಸರ್ ಆಗಿದ್ದ ಹರಿಯಾಣದ ಝಜ್ಜರ್‌ನ ಗೌರವ್ ದತ್ (27) ಮೃತರು. ಮೇ 19ರಂದು ಸಾಯಂಕಾಲ ಗಲ್ಫ್ ಆಫ್ ಏಡನ್‌ನಲ್ಲಿ ಅರಬ್ಬಿ ಸಮುದ್ರದಲ್ಲಿ ಐಎನ್‌ಎಸ್ ಸುಮೆಧಾ ಗಸ್ತು ನಡೆಸುತ್ತಿದ್ದಾಗ ನೌಕೆಯ ಮುಖ್ಯ ಇಂಜೀನ್‌ನ ನಿಯಂತ್ರಕ ಚಕ್ರದ ಬಳಿ ಕಾರ್ಯನಿರ್ವಹಿಸುತ್ತಿದ್ದರು. ಅದರ ರೆಕ್ಕೆಯ ಭಾಗ ಎದೆಗೆ ಬಡಿದು ಗೌರವ್ ಕೊನೆಯುಸಿರೆಳೆದಿದ್ದರು. ಈ ಪ್ರದೇಶವು ಕಾರವಾರದಿಂದ ಸುಮಾರು 1535 ನಾಟಿಕಲ್ ಮೈಲು (3000 ಕಿಲೋಮೀಟರ್) ದೂರದಲ್ಲಿದೆ.

ನಡು ಸಮುದ್ರದಲ್ಲಿ ಅವರು ಮೃತಪಟ್ಟಿದ್ದರಿಂದ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿ ಬಂದಿದ್ದರ ಹಿನ್ನೆಲೆಯಲ್ಲಿ ಐಎನ್‌ಎಸ್ ಸುಮೇಧಾವನ್ನು ಗಲ್ಫ್ ಆಫ್ ಏಡನ್‌ನಿಂದ ಭಾರತಕ್ಕೆ ಹೊರಡಿಸಲಾಗಿತ್ತು.

ಮೃತ ಅಧಿಕಾರಿಯ ಪಾರ್ಥಿವ ಶರೀರವನ್ನು ಹೆಲಿಕಾಪ್ಟರ್ ಮೂಲಕ ಹರಿಯಾಣಕ್ಕೆ ಕೊಂಡೊಯ್ಯಲಾಯಿತು.  


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶಿರೂರು ಕರಾವಳಿ ಬಳಿ ದೋಣಿ ದುರಂತ: ಐವರು ಮೀನುಗಾರರ ರಕ್ಷಣೆ

CJP ಪ್ರತಿಭಟನೆಯಲ್ಲಿ ನೇಪಾಳ ಥರಾ ಮಾಡ್ತೀವಿ, ಪಾರ್ಲಿಮೆಂಟ್ ಭವನವನ್ನೇ ಕಿತ್ತು ಹಾಕ್ತೀವಿ ಎಂದು ಕಿರುಚಾಡಿದ ಯುವಕ Video

ಸಿಎಂ ಜೋಸೆಫ್‌ ವಿಜಯ್ ವಿರುದ್ಧ ನಾಲಿಗೆ ಹರಿಬಿಟ್ಟ ಡಿಎಂಕೆ ಶಾಸಕ ಜಿ.ಆರ್. ಮಾರ್ಕಂಡಿಯನ್ ಅರೆಸ್ಟ್‌

50 ಬಾರಿ ಪ್ರಯತ್ನಿಸಿದರೂ ಸಿಗದ ಸರ್ಕಾರಿ ಕೆಲಸ: ರಾಜ್ಯಪಾಲರಿಂದ ಚಿನ್ನದ ಪದಕ ಪಡೆದಿದ್ದ ಯುವಕ ಸಾವಿಗೆ ಶರಣು

ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಯಾಕೆ ಅಜ್ಜಿ ಚನ್ನಮ್ಮನ ಅಂತ್ಯಸಂಸ್ಕಾರಕ್ಕೆ ಬರಲಿಲ್ಲ: ಇವರೇ ಕಾರಣವಂತೆ

ಮುಂದಿನ ಸುದ್ದಿ
Show comments