Select Your Language

Notifications

webdunia
webdunia
webdunia
webdunia

ಸಿಟಿ ರವಿ ಹೇಳಿಕೆಗೆ ತಿರುಗೇಟು ನೀಡಿದ ದಿನೇಶ್ ಗುಂಡೂರಾವ್

ಸಿಟಿ ರವಿ ಹೇಳಿಕೆಗೆ ತಿರುಗೇಟು ನೀಡಿದ ದಿನೇಶ್ ಗುಂಡೂರಾವ್
bangalore , ಮಂಗಳವಾರ, 13 ಸೆಪ್ಟಂಬರ್ 2022 (21:24 IST)
ಪುಂಡು ಪೋಕರಿಯಂತೆ ಮಾತಾಡಿದ್ರೆ ಗೌರವ ಉಳಿಯುವುದಿಲ್ಲ ಎಂದು ಬಿಜೆಪಿ ಸರ್ಕಾರದ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
 
ಸಿದ್ದರಾಮಯ್ಯ ವಿರುದ್ಧ ಸಿ.ಟಿ ರವಿ ಹೇಳಿಕೆಗೆ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.ಸರಣಿ ಟ್ವೀಟ್ ಮೂಲಕ ಪುಂಡು ಪೋಕರಿಯಂತೆ ಮಾತಾಡಿದರೆ ಗೌರವ ಉಳಿಯುವುದಿಲ್ಲ ಎಂದು ಸಿಟಿ ರವಿ ವಿರುದ್ಧ ದಿನೇಶ್ ಗುಂಡೂರಾವ್ ಆಕ್ರೋಶ ಹೊರಹಾಕಿದ್ದಾರೆ.ಸಿದ್ದರಾಮಯ್ಯ  ಬಗ್ಗೆ ಅತ್ಯಂತ ತುಚ್ಛವಾಗಿ ಮಾತಾಡಿರುವ ಸಿ.ಟಿ ರವಿ ತಮ್ಮ ಸಂಸ್ಕಾರವೇನು ಎಂಬುವುದು ತೋರಿಸಿದ್ದಾರೆ.ತಾವು ಬಳಸುವ ಭಾಷೆಯ ಮೇಲೆ ಹಿಡಿತವಿರಬೇಕು. ರವಿ ಸಾರ್ವಜನಿಕ ಜೀವನದಲ್ಲಿರುವವರು, ಜೊತೆಗೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ.ಈ ಸ್ಥಾನದ ಘನತೆಗೆ ತಕ್ಕಂತೆ ಮಾತಾಡಲಿ ಎಂದು ಕಿಡಿಕಾರಿದ್ದಾರೆ.
 
ಸಿಟಿ ರವಿಯವರಿಗೆ ಲೂಟಿ ರವಿ ಎಂಬ ಅನ್ವರ್ಥನಾಮ ಇಟ್ಟಿದ್ದು ಸಿದ್ದರಾಮಯ್ಯರಲ್ಲ.ಸ್ವತಃ ಅವರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೇ ಲೂಟಿ ರವಿ ಎನ್ನುತ್ತಾರೆ.ಇದನ್ನು ಸಿದ್ದರಾಮಯ್ಯ ಹೇಳಿದ್ದೇ ರವಿಯವರಿಗೆ ಚೇಳು ಕಡಿದಂತಾಗಿದೆ ಹಾಗಾಗಿ ಸಿದ್ದರಾಮಯ್ಯ ವಿರುದ್ಧ ಕೀಳು ಪದಪ್ರಯೋಗ ಮಾಡಿ ರವಿ ತಮ್ಮ ಹೊಲಸು ನಾಲಿಗೆ ಪ್ರದರ್ಶಿಸಿದ್ದಾರೆ.ಕೆಲವರಿಗೆ ದೊಡ್ಡವರನ್ನು ತೆಗಳಿ ದೊಡ್ಡವರೆನಿಸಿಕೊಳ್ಳುವ ಚಟವಿರುತ್ತದೆ ಸಿಟಿ ರವಿಗೂ ಈ ಚಟವಿದೆ.ಸಿದ್ದರಾಮಯ್ಯರ ರಾಜಕೀಯ ಅನುಭವ, ಹಿರಿತನ ಮತ್ತು ಯೋಗ್ಯತೆ ಈ ನಾಡಿಗೆ ತಿಳಿದಿದೆ.ಅವರ ಬಗ್ಗೆ ಕೀಳಾಗಿ ಮಾತಾಡುವ ರವಿ ತಮ್ಮ ಯೋಗ್ಯತೆಯೇನು ಎಂದು ಆತ್ಮವಿಮರ್ಶೆ ಮಾಡಿಕೊಳ್ಳಲಿ.ಸಿಟಿ‌ ರವಿ ಹೇಳಿಕೆಗೆ ಸರಣಿ ಟ್ವಿಸ್ಟ್ ಮೂಲಕ ದಿನೇಶ್ ಗುಂಡೂರಾವ್  ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯ ಸಚಿವ ಡಾ ಕೆ ಸುಧಾಕರ್ ತವರು ಕ್ಷೇತ್ರದಲ್ಲೇ ಶ್ರದ್ದಾಂಜಲಿ ವಾಹನಕ್ಕೆ ಶ್ರದ್ದಾಂಜಲಿ