ಕೊರೊನಾ ಸಮಯದಲ್ಲಿ ರಾಜ್ಯ ಸರಕಾರ ಬಡವರ ಹಣ ಲೂಟಿ ಹೊಡೆಯುತ್ತಿದ್ದು, ಅದಕ್ಕೆ ಇನ್ಮುಂದೆ ಅವಕಾಶ ನೀಡೋದಿಲ್ಲ.
ರಾಜ್ಯ ಸರಕಾರಕ್ಕೆ ಬ್ರೇಕ್ ಫೇಲ್ ಆಗಿದೆ ಎಂದು ಟೀಕೆ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಸರಕಾರದ ಭ್ರಷ್ಟಾಚಾರ ಸಹಿಸೋದಿಲ್ಲ ಎಂದು ಗುಡುಗಿದ್ದಾರೆ.
ಕೊರೊನಾ ತಡೆಗೆ ಕೇಂದ್ರ ಸರಕಾರ ಹೇಳಿದಂತೆ ದೀಪ ಹಚ್ಚಿದ್ದೇವೆ, ಗಂಟೆ ಹೊಡೆದಿದ್ದೇವೆ. ಆದರೆ ಇನ್ಮುಂದೆ ಅವರು ಹೇಳಿದಂತೆ ಕುಣಿಯೋದಿಲ್ಲ ಅಂತ ಖಡಕ್ಕಾಗಿ ಹೇಳಿದ್ದಾರೆ.