Select Your Language

Notifications

webdunia
webdunia
webdunia
webdunia

ಜಿಪಂ ಉಪಾಧ್ಯಕ್ಷರಿಗೆ ನೋಟಿಸ್ ಜಾರಿಮಾಡಿದ ಡಿಸಿ

ಜಿಪಂ ಉಪಾಧ್ಯಕ್ಷರಿಗೆ ನೋಟಿಸ್ ಜಾರಿಮಾಡಿದ ಡಿಸಿ
ಹಾಸನ , ಬುಧವಾರ, 23 ಜನವರಿ 2019 (15:38 IST)
ಕೋಟ್ಯಾಂತರ ರೂಪಾಯಿ ಮೌಲ್ಯದ ಮರಳನ್ನು ಅಕ್ರಮವಾಗಿ‌ ದಾಸ್ತಾನು ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಿಗೆ ಜಿಲ್ಲಾಧಿಕಾರಿ ನೋಟೀಸ್ ಜಾರಿ ಮಾಡಿದ್ದಾರೆ.

ಜಿಪಂ ಉಪಾಧ್ಯಕ್ಷ ಸುಪ್ರದೀಪ್ತ್ ಯಜಮಾನಗೆ ಡಿಸಿ ನೋಟಿಸ್ ಜಾರಿಗೊಳಿಸಿದ್ದಾರೆ. ಕಾರಣ ಕೇಳಿ ತಿಳುವಳಿಕೆ ನೋಟಿಸ್ ನ್ನು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜಾರಿಗೊಳಿಸಿದ್ದಾರೆ.

ಸಕಲೇಶಪುರ ತಾಲ್ಲೂಕು ಅರೇಕೆರೆ ಗ್ರಾಮದಲ್ಲಿ 9 ಸಾವಿರ ಮೆಟ್ರಿಕ್ ಟನ್ ಮರಳು ಪತ್ತೆಯಾಗಿತ್ತು. 
ಡಿಸಿ ನೇತೃತ್ವದಲ್ಲಿ ಮರಳು ದಾಸ್ತಾನು ಕೇಂದ್ರದ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದರು. ಜನವರಿ 10 ರಂದು ಮರಳು ಅಡ್ಡೆ ಮೇಲೆ ದಾಳಿ ನಡೆಸಿದ್ದರು ಜಿಲ್ಲಾಧಿಕಾರಿ ನೇತೃತ್ವದ ತಂಡದವರು.

ಎತ್ತಿನಹೊಳೆ ಯೋಜನೆ ಕಾಮಗಾರಿಗೆ  ಓಷನ್ ಕಂಪನಿಗೆ ಸೇರಿದ ಮರಳನ್ನು ಸರ್ಕಾರಕ್ಕೆ ರಾಜಧನ ಕಟ್ಟದೆ ವಂಚಿಸಿ ಅಕ್ರಮವಾಗಿ ಮರಳು ಸಂಗ್ರಹಿಸಿದ್ದರು.

ಓಷನ್ ಕಂಪನಿ ವಿರುದ್ಧ ಸಕಲೇಶಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಕ್ರಮ ಮರಳು ದಾಸ್ತಾನಿಗೆ ಜಿಪಂ ಉಪಾಧ್ಯಕ್ಷ  ಶಿಫಾರಸ್ಸು ನೀಡಿದ್ದಾರೆ ಎನ್ನಲಾಗಿದ್ದು, ಕಾರಣ ಕೇಳಿ ನೋಟೀಸ್ ಜಾರಿಗೊಳಿಸಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ದೇವಾಲಯಗಳಲ್ಲಿ ಹುಂಡಿ ಕದಿಯುತ್ತಿದ್ದವರ ಸೆರೆ!