Publish Date: Sun, 29 Dec 2019 (11:22 IST)
Updated Date: Sun, 29 Dec 2019 (11:25 IST)
ಉಡುಪಿ : ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಪೇಜಾವರ ಶ್ರೀಗಳು ಇಂದು ಕೊನೆಯುಸಿರೆಳೆದಿದ್ದಾರೆ. ಆದರೆ ತಮಗೆ ಕೊನೆ ದಿನಗಳು ಸಮೀಪಿಸುತ್ತಿರುವ ಬಗ್ಗೆ ಶ್ರೀಗಳಿಗೆ ಮೊದಲೇ ತಿಳಿದಿತ್ತಾ ಎಂಬ ಇದೀಗ ಅನುಮಾನ ವ್ಯಕ್ತವಾಗಿದೆ.
ಹೌದು. ಪೇಜಾವರ ಶ್ರೀಗಳು ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಸುಗಣೇಂದ್ರ ಸ್ವಾಮೀಜಿಯವರನ್ನು ಮಂತ್ರಾಲಯದಲ್ಲಿ ಭೇಟಿಯಾದ ವೇಳೆ ಡಿ.23ರ ನಂತರ ವಿದೇಶಕ್ಕೆ ಹೋಗಬೇಡಿ ಎಂದು ಹೇಳಿದ್ದರು ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿದ ಪುತ್ತಿಗೆ ಮಠದ ಸುಗಣೇಂದ್ರ ಸ್ವಾಮೀಜಿ, ಪೇಜಾವರ ಶ್ರೀಗಳು ಮಂತ್ರಾಲಯದಲ್ಲಿ ಭೇಟಿಯಾದಾಗ ಡಿ.23ರ ನಂತರ ವಿದೇಶಕ್ಕೆ ಹೋಗಬೇಡಿ ಎಂದು ಶ್ರೀಗಳು ಎರಡೆರಡು ಬಾರಿ ಹೇಳಿದ್ದರು. ಯಾಕೆ ಎಂದು ಕೇಳಿದ್ದಕ್ಕೆ ನಸು ನಕ್ಕಿದ್ದರು. ಹೀಗೆ ಆಗುತ್ತದೆ ಎಂದು ಶ್ರೀಗಳಿಗೆ ಮೊದಲೆ ಮುನ್ಸೂಚನೆ ಇತ್ತಾ ಎಂದು ತಿಳಿದಿಲ್ಲ ಎಂದು ಹೇಳಿದ್ದಾರೆ.