Select Your Language

Notifications

webdunia
webdunia
webdunia
webdunia

ಲವ್ ಯೂ, ವಿ ಮಿಸ್ ಯೂ ಅಪ್ಪು ಎಂದು ಡೈಲಾಗ್ ಕಿಂಗ್ ಸಾಯಿಕುಮಾರ್ ಭಾವುಕ

ಲವ್ ಯೂ, ವಿ ಮಿಸ್ ಯೂ ಅಪ್ಪು ಎಂದು ಡೈಲಾಗ್ ಕಿಂಗ್ ಸಾಯಿಕುಮಾರ್ ಭಾವುಕ
bangalore , ಶನಿವಾರ, 13 ನವೆಂಬರ್ 2021 (21:35 IST)
ಬೆಂಗಳೂರು: ಆ ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ವಿ ಲವ್ ಯೂ, ವಿ ಮಿಸ್ ಯೂ ಅಪ್ಪು ಎಂದು ಡೈಲಾಗ್ ಕಿಂಗ್ ಸಾಯಿಕುಮಾರ್ ಭಾವುಕರಾದ ಘಟನೆ ನಗರದಲ್ಲಿ ನೆಡೆಯಿತು.
 
ಶನಿವಾರ ಬಹುಭಾಷಾ ನಟ ಸಾಯಿ ಕುಮಾರ್ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್, ಪಾರ್ವತಮ್ಮ ರಾಜಕುಮಾರ್ ಹಾಗು ನಟಸಾರ್ವಭೌಮ ರಾಜಕುಮಾರ್ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು.
 
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಾಯಿ ಕುಮಾರ್ ಕಂಠೀರವ ಸ್ಟುಡಿಯೋಗೆ ಬಂದು ಶೂಟಿಂಗ್ ಮಾಡುತ್ತಿದ್ದೇವೆ ಎಂದು ಈಗಲೂ ಅನ್ನಿಸುತ್ತಿದೆ.ಅಪ್ಪು ರನ್ನು ಕಳೆದುಕೊಂಡಿದ್ದೇವೆ ಎಂದು ನಂಬಲು ಆಗುತ್ತಿಲ್ಲ ಎಂದು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು.
 
ಶಿವಣ್ಣನ ಜೊತೆ ರಾಘಣ್ಣನ ಮಗನ ಜೊತೆ ನಟಿಸಿದ್ದೇನೆ ಅಪ್ಪು ಜತೆ ಆಕ್ಟ್ ಮಾಡಬೇಕು ಎನ್ನುವ ಆಸೆ ಇತ್ತು. ನಂತರ ಯುವರತ್ನ ಚಿತ್ರದಲ್ಲಿ ನಟಿಸಿದ್ದೆ. ಆದ್ದರಿಂದ ನಮ್ ಜತೆ ಇದ್ದಾರೆ ಎನ್ನುವ ಫೀಲಿಂಗ್ ಬರುತ್ತಿದೆ ಎಂದರು.
 
ದೇವರನ್ನು ತುಂಬ ನಂಬುತ್ತೇನೆ ಆದರೆ ಇಗೀಗ 
ದೇವರ ಮೇಲೆ ತುಂಬ ಕೋಪ ಬರುತ್ತಿದೆ. ನನ್ನ ಮಗಳು, ಅಳಿಯ ಪ್ರಾಜೆಕ್ಟ್ ಲಾಂಚ್ ಮಾಡಲು ಬಂದಿದ್ದರು. ನಮ್ಮ ಜೀವನ ಕ್ಷಣಿಕ. ದೇಶ ನಮಗೇನು ಮಾಡಿದೆ ಎನ್ನುವುದಕ್ಕಿಂತ. ನಾವು ದೇಶಕ್ಕಾಗಿ ಏನು ಮಾಡಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಅಂತಹ ಸೇವೆಗಳನ್ನು ಪುನೀತ್ ಸಮಾಜಕ್ಕಾಗಿ ಮಾಡಿದ್ದಾರೆ ಎಂದು ಶ್ಲಾಘಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಗೋರಿಪಾಳ್ಯದಲ್ಲಿ ಗೋವಧೆಯ ಯತ್ನ: ಕೊನೆಗೂ ಅಕ್ರಮ ಕಸಾಯಿ ಖಾನೆಗಳ ವಿರುದ್ಧ ದಾಖಲಾದ ಎಫ್ಐಆರ್