ರಾಬರಿಗೆ ಸ್ಪೂರ್ತಿಯಾಗಿದ್ದು, ಧೂಮ್ 2, ದೃಶ್ಯಂ ಸಿನಿಮಾಗಳು ..!

Webdunia
ಮಂಗಳವಾರ, 1 ಆಗಸ್ಟ್ 2023 (18:49 IST)
ಹದಿನೆಂಟು ವರ್ಷ ತುಂಬದ ಹಾಗು ತನ್ನ ಜ್ಯೂವೆಲ್ಲರಿ ಶಾಪ್‌ನಲ್ಲಿ ಕೆಲಸ ಮಾಡ್ತಿದ್ದ ಇಬ್ಬರು ಅಪ್ರಾಪ್ತರನ್ನ ರಾಜು ಜೈನ್‌ ಈ ಕೃತ್ಯಕ್ಕೆ ಬಳಸಿದ್ದ. ಚಿನ್ನಾಭರಣ ಲೂಟಿ ನಾಟಕವಾಡಿದರೆ ಅತ್ತ ಚಿನ್ನಾಭರಣ ಕೂಡ ಸೇಫ್‌ ಇತ್ತ ಇನ್ಸ್ಯೂರೆನ್ಸ್‌ ಹಣ ಕೂಡ ಬರುತ್ತೆ ಎಂಬ ಕಾರಣಕ್ಕೆ ಕಳೆದ ಒಂದು ತಿಂಗಳಿಂದ ಧೂಮ್‌ 2 ಹಾಗು ದೃಶ್ಯಂ ಎಂಬ ಚಿತ್ರದಲ್ಲಿ ಬರುವಂತೆ ಪ್ಲಾನಿಂಗ್‌ ಮಾಡಿದ್ದರು ಎನ್ನಲಾಗಿದೆ. ಹಾಗು ಇಂತಹದ್ದೇ ದಿನ ಕೆಲಸ ಹಾಗು ಸಮಯದಲ್ಲಿ  ಆಗಬೇಕು ಎಂಬ ಡೇಟ್‌ ಕೂಡ ಫಿಕ್ಸ್‌ ಮಾಡಿದ್ದರು ಎನ್ನಲಾಗಿದೆ.

 ಇನ್ನು ಪ್ಲಾನಿಂಗ್‌ನಂತೆ ಹೈದರಾಬಾದ್‌ಗೆ ಚಿನ್ನಾಭೃಣ ಸಾಗಿಸಲು ಮೊದಲೇ ಟಿಕೇಟ್‌ ಬುಕ್‌ ಮಾಡಿದ್ದರು. ಹಾಗು ಚಿನ್ನಾಭರಣ ಸಾಗಿಸಲು  ಬೇಕಾದಂತಹ ರಿಸೀಪ್ಟ್‌‌ಗಳನ್ನೂ ಕೂಡ ತಯಾರು ಮಾಡಿದ್ದರು. ಅವೆಲ್ಲಾವೂ ಕೂಡ ಸಿಸಿಟಿವಿಯ ಮುಂದೆಯೇ ನಡೆಸಿದ್ದರು. ನಂತರ ಅದೇ ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗುವ ರೀತಿಯಲ್ಲಿ ಇಬ್ಬರು ಅಪ್ರಾಪ್ತರು ಚಿನ್ನಾಭರಣವನ್ನ ಓಲಾ ಬೈಕ್‌ನಲ್ಲಿ ಇಟ್ಟು ಅಲ್ಲಿಂದ ತೆರಳಿದ್ದರು. ನಂತರ ಪ್ಲಾನಿಂಗ್‌ನಂತೆ ಫ್ಲೈ ಓವರ್‌ ಬಳಿ ಬಂದು ಚಿನ್ನವನ್ನ ಅಡಗಿಸಿ ನಂತರ ಮಾಲೀಕನಿಗೆ ಇಬ್ಬರು ಅಪ್ರಾಪ್ತರು ಕರೆ ಮಾಡಿದ್ದರು. ನಂತರ ರಾಜು ಜೈನ್‌ ಪೊಲೀಸರಿಗೆ ಕರೆ ಮಾಡಿ ವಿಚಾರ ಮುಟ್ಟಿಸಿ ಅದಕ್ಕೆ ಪೂರಕ ಸಿಸಿಟಿವಿಗಳನ್ನ ಸಾಕ್ಷಿಯಾಗಿ ಕೊಟ್ಟಿದ್ದ. ಇನ್ನು ಹೈದರಾಬಾದ್‌ನಿಂದ ಬಂದ ವಾಟ್ಸಪ್‌ ಕಾಲ್‌ ಹಿಂದೆ ಬಿದ್ದಿದ್ದ ಪೊಲೀಸರಿಗೆ ಅಸಲಿ ಸಂಗತಿ ಹೊರ ಬಿದ್ದಿತ್ತು. ಒಂದು ತಿಂಗಳ ಪ್ಲಾನಿಂಗ್‌ನಲ್ಲಿ 15 ದಿನಗಳವರೆಗೂ ಟ್ರೈನಿಂಗ್‌ ನಡೆದಿತ್ತು. ಈ ವೇಳೆ ಪೊಲೀಸರ ಬಳಿ ಯಾವ ರೀತಿ ಉತ್ತರಿಸಿಬೇಕೆಂಬುದನೆಲ್ಲಾ ರಾಜು ಜೈನ್‌ ಟ್ರೈನಿಂಗ್‌ ನೀಡಿದ್ದ. 

ಇನ್ನು ಕೃತ್ಯಕ್ಕೆ ಬಳಸಿದ್ದು 2.5 ಕೇಜಿಯಾದ್ರೂ ಒಂದು ಕೇಜಿ ಹೆಚ್ಚು ಚಿನ್ನಾಭರಣ ಕಳೆದಹೋಗಿದೆ ಎಂದು ದೂರು ನೀಡಿ ದಾರಿ ತಪ್ಪಿಸಿದ್ದರು. ಸದ್ಯ ಅಷ್ಟೂ ಜನ ಆರೋಪಿಗಳನ್ನ ಬಂಧಿಸಿ ಚಿನ್ನಾಭರಣವನ್ನ ಕಾಟನ್‌ ಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಸ್ಸಾಂನ ಗಾಯಕ ಜುಬಿನ್ ಗರ್ಗ್ ನಿಧನ: ನ್ಯಾಯಯುತ ತನಿಖೆಗೆ ಮಲ್ಲಿಕಾರ್ಜುನ ಖರ್ಗೆ ಒತ್ತಾಯ

ನನಗೇನಾದರೆ ರಾಜ್ಯ ಸರ್ಕಾರ, ಪ್ರಿಯಾಂಕ್ ಖರ್ಗೆ ಹೊಣೆ: ಛಲವಾದಿ ನಾರಾಯಣಸ್ವಾಮಿ

ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾದ ರಾಯಚೂರಿನ ಪಿಡಿಓಗೆ ಬಿಗ್ ಶಾಕ್

ಆರ್‌ಎಸ್‌ಎಸ್‌ ನಿಷೇಧದ ಹಿಂದಿನ ಉದ್ದೇಶದ ಬಗ್ಗೆ ನ್ಯಾ ಸಂತೋಷ ಹೆಗಡೆ ಸ್ಫೋಟಕ ಹೇಳಿಕೆ

ಸಚಿವೆಯಾದ ಕ್ರಿಕೆಟರ್ ರವೀಂದ್ರ ಜಡೇಜಾ ಪತ್ನಿ ಹಿನ್ನೆಲೆ ಗೊತ್ತಾ

ಮುಂದಿನ ಸುದ್ದಿ
Show comments