Publish Date: Tue, 09 May 2023 (12:49 IST)
Updated Date: Tue, 09 May 2023 (12:22 IST)
ತಮಿಳುನಾಡಿನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಬುರ್ಕಾ ಧರಿಸಿ ಬಂದಿದ್ದ ವ್ಯಕ್ತಿಯೊಬ್ಬ ತಾರಾಪುರಂ ಪಕ್ಕದ ಅಲಂಗಿಯಂ ಪ್ರದೇಶದ ಕೆನರಾ ಬ್ಯಾಂಕ್ನಲ್ಲಿ ದರೋಡೆಗೆ ಯತ್ನಿಸಿದ್ದ.
ಗನ್ ಮತ್ತು ಟೈಮ್ ಬಾಂಬ್ ಹೊಂದಿರುವುದಾಗಿ ಹೇಳಿಕೊಂಡು ಎಲ್ಲರನ್ನು ಹೆದರಿಸಿದ್ದ. ಅಲ್ಲಿದ್ದ ಜನರು ಆ ವ್ಯಕ್ತಿಯ ಬಳಿ ಬಂದೂಕು ಮತ್ತು ಬಾಂಬ್ ಇದೆ ಎಂದು ಹೆದರಿ ಪಕ್ಕಕ್ಕೆ ಸರಿದಿದ್ದರು.
ಆದರೆ ಸ್ವಲ್ಪ ಸಮಯದಲ್ಲೇ ಕಳ್ಳ ಹಿಡಿದಿದ್ದ ಚಾಕು ಕೆಳಗೆ ಬಿದ್ದಿತು. ಅವನು ಅದನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗ, ಹತ್ತಿರದಲ್ಲಿದ್ದ ಮುದುಕ ತನ್ನ ಟವೆಲ್ ಬಳಸಿ ಆತನನ್ನು ಹಿಡಿದಿದ್ದರು. ತಕ್ಷಣ ಇತರರು ಸಹಾಯಕ್ಕೆ ಬಂದು ಕಳ್ಳನನ್ನು ಹಿಡಿದಿದ್ದಾರೆ.
ಆತನ ಕೈಯಿಂದ ಬಂದೂಕನ್ನು ಕಸಿದು ನೋಡಿದಾಗ ಅದು ಆಟಿಕೆ ಬಂದೂಕು ಎಂದು ತಿಳಿದುಬಂದಿದೆ. ಆತನ ಕೈಯಲ್ಲಿದ್ದ ಟೈಮ್ ಬಾಂಬ್ ಕೂಡ ನಕಲಿಯಾಗಿತ್ತು. ನಂತರ ಪೊಲೀಸರಿಗೆ ಕರೆ ಮಾಡಿ ಆತನನ್ನು ಒಪ್ಪಿಸಲಾಗಿತ್ತು.