Publish Date: Wed, 21 Feb 2018 (10:26 IST)
Updated Date: Wed, 21 Feb 2018 (10:29 IST)
ಹಾಸನ : ಸುಪ್ರೀಂಕೋರ್ಟ್ ನೀಡಿರುವ ಕಾವೇರಿ ನೀರು ಹಂಚಿಕೆ ಅಂತಿಮ ತೀರ್ಪು ನನಗೆ ತೃಪ್ತಿ ತಂದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಹೇಳಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ಎ ಕಾಳೇನಹಳ್ಳಿಯಲ್ಲಿ ನಡೆದ ಉದ್ಘಾಟನೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ‘ನಮಗೆ ನ್ಯಾಯಯುತವಾಗಿ 40 ಟಿಎಂಸಿಗೂ ಅಧಿಕ ನೀರು ಸಿಗಬೇಕಿತ್ತು. ನಮಗೆ ನ್ಯಾಯಯುತವಾಗಿ 40 ಟಿಎಂಸಿಗೂ ಅಧಿಕ ನೀರು ಸಿಗಬೇಕಿತ್ತು. ನಾವು ತಮಿಳುನಾಡಿಗೆ ಯಾವುದೇ ರೀತಿಯಲ್ಲೂ ಮೋಸ ಮಾಡಿಲ್ಲ. ಆದರೂ ಅವರು ತಕರಾರು ಮಾಡಿದ್ರೆ ನಮ್ಮಲ್ಲೂ ಅಸ್ತ್ರಗಳಿವೆ. ಅಂತಿಮ ತೀರ್ಪು ನನಗೆ ತೃಪ್ತಿ ತಂದಿಲ್ಲ. ನಮ್ಮ ಜನರಿಗೆ ಆಗಿರುವ ಅನ್ಯಾಯದ ವಿರುದ್ಧ ಮುಂದಿನ ದಿನಗಳಲ್ಲೂ ಹೋರಾಟ ಮಾಡುವೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ