Select Your Language

Notifications

webdunia
webdunia
webdunia
webdunia

ಆಸ್ಪತ್ರೆಗೂ ಬಂದ ನಲಪಾಡ್ ನಿಂದ ವಿದ್ವತ್ ನ್ನು ರಕ್ಷಿಸಿದ್ದು ಡಾ. ರಾಜ್ ಮೊಮ್ಮಗ?!

ಆಸ್ಪತ್ರೆಗೂ ಬಂದ ನಲಪಾಡ್ ನಿಂದ ವಿದ್ವತ್ ನ್ನು ರಕ್ಷಿಸಿದ್ದು ಡಾ. ರಾಜ್ ಮೊಮ್ಮಗ?!
ಬೆಂಗಳೂರು , ಬುಧವಾರ, 21 ಫೆಬ್ರವರಿ 2018 (10:12 IST)
ಬೆಂಗಳೂರು: ರೆಸ್ಟೋರೆಂಟ್ ನಲ್ಲಿ ವಿದ್ವತ್ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ ಮೇಲೆ ಅಷ್ಟಕ್ಕೇ ಸುಮ್ಮನಾಗದ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮತ್ತು ಗ್ಯಾಂಗ್ ಆಸ್ಪತ್ರೆಗೂ ಬಂದು ಗಲಾಟೆ ಮಾಡಿದ್ದರು ಎಂದು ವಿದ್ವತ್ ಸಹೋದರ ಖಾಸಗಿ ವಾಹಿನಿಗೆ ಹೇಳಿದ್ದಾರೆ.
 

2 ಕಾರುಗಳಲ್ಲಿ ವಿದ್ವತ್ ದಾಖಲಾಗಿದ್ದ ಮಲ್ಯ ಆಸ್ಪತ್ರೆಗೆ ಬಂದ  ನಲಪಾಡ್ ಮತ್ತು ಗ್ಯಾಂಗ್ ಪ್ರಥಮ ಚಿಕಿತ್ಸೆ ಪಡೆಯುತ್ತಿದ್ದ ವಿದ್ವತ್ ಇದ್ದ ಕೊಠಡಿಗೆ ನುಗ್ಗಿದ್ದರು. ಅಷ್ಟೇ ಅಲ್ಲ, ಅಲ್ಲಿಯೂ ವಿದ್ವತ್ ಮೇಲೆ ಹಲ್ಲೆ ನಡೆಸಲು ಮಂದಾಗಿದ್ದ.

ಈ ಸಂದರ್ಭದಲ್ಲಿ ತಡೆಯಲು ಹೋದ ತನ್ನ ಕೊರಳ ಪಟ್ಟಿ ಹಿಡಿದು ಬೆದರಿಸಿದ ಎಂದು ಸಹೋದರ ಸಾತ್ವಿಕ್ ಹೇಳಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ರಾಘವೇಂದ್ರ ರಾಜ್ ಕುಮಾರ್ ಪುತ್ರ ಗುರು ರಾಜ್ ಕುಮಾರ್ ನೋಡಿ ಸುಮ್ಮನಾದ ನಲಪಾಡ್ ಅಲ್ಲಿಂದ ತೆರಳಿದ್ದ. ಒಂದು ವೇಳೆ ಗುರು ಇಲ್ಲದೇ ಹೋಗಿದ್ದರೆ ನನ್ನ ತಮ್ಮನನ್ನು ಕೊಂದೇ ಬಿಡುತ್ತಿದ್ದರು ಎಂದು ಸಾತ್ವಿಕ್ ಮಾಧ್ಯಮದ ಮುಂದೆ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಹ್ಯಾರಿಸ್ ಪುತ್ರ ಹಲ್ಲೆ ನಡೆಸಿದ್ದು ಹೇಗೆ? ವಿದ್ವತ್ ಬಾಯ್ಬಿಟ್ಟ ವೃತ್ತಾಂತ!