Select Your Language

Notifications

webdunia
webdunia
webdunia
webdunia

ದೇವೇಗೌಡ ಹಾಸನಕ್ಕೆ ಮಾತ್ರ ಮಣ್ಣಿನ ಮಗ!

ದೇವೇಗೌಡ ಹಾಸನಕ್ಕೆ ಮಾತ್ರ ಮಣ್ಣಿನ ಮಗ!
ತುಮಕೂರು , ಶುಕ್ರವಾರ, 24 ಮೇ 2019 (18:18 IST)
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಅವರ ವಿರುದ್ಧ ಟೀಕೆಗಳು ಹೆಚ್ಚಾಗುತ್ತಿವೆ. ದೇವೇಗೌಡರು ಹಾಸನಕ್ಕೆ ಮಣ್ಣಿನಮಗನೇ ಹೊರತು ತುಮಕೂರಿಗಲ್ಲ ಅಂತ ವ್ಯಂಗ್ಯ ಮಾಡಲಾಗಿದೆ.

ತುಮಕೂರಿನ ಮಣ್ಣಿನ ಮಗ ಗೆದ್ದಾಯ್ತು. ದೇವೇಗೌಡರು ಬಹಳ ಜನರನ್ಮು ತೆಗೆದಿದ್ದಾರೆ. ನನ್ನನ್ನು ಎರಡು ಬಾರಿ ತೆಗೆದಿದ್ದಾರೆ. ಈಗ ಅಚಾನಕ್ಕಾಗಿ ನನ್ನ ಕೈಗೆ ಸಿಕ್ಕಿಹಾಕಿಕೊಂಡ್ರು. ಜನ ತಕ್ಕ ಪಾಠ ಕಲಿಸಿದ್ರು. ಇನ್ನಾದರೂ ಅವರು ವಯೋವೃದ್ದರು ನೆಮ್ಮದಿಯಿಂದ ರಾಜಕಾರಣ ಮಾಡಿಕೊಂಡಿರಲಿ. ಮಹಾಘಟಬಂಧನ ಅವೆಲ್ಲಾ ಬೇಡ. ಅವರು ದ್ವೇಷದ ರಾಜಕಾರಣ ಮಾಡಿದ್ದೇ ಸೋಲಿಗೆ ಕಾರಣವಾಯಿತು ಅಂತ ಜಿ.ಎಸ್.ಬಸವರಾಜು ಹೇಳಿದ್ದಾರೆ.

ತುಮಕೂರಿಗೆ ಹೇಮಾವತಿ ನೀರು ಕೊಡದಂತೆ ಅವರು ಹಾಗೂ ಅವರ ಮಗ ರೇವಣ್ಣ ಮೋಸ ಮಾಡಿದ್ರು. ಕಾಂಗ್ರೆಸ್ ನವರೂ ನಮ್ಮ ಸ್ನೇಹಿತರೇ. ತುಮಕೂರಿನಲ್ಲಿ ದೇವೇಗೌಡ ವರ್ಸಸ್ ಬಸವರಾಜು ಎಂದೇ ಫೈಟ್ ಇತ್ತು. ಕಾಂಗ್ರೆಸ್ ನಾಯಕರೂ ನನಗೆ ಸಹಕಾರ ನೀಡಿರಬಹುದೇನೋ. ಅವರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

26 ವರ್ಷದ ಮಹಿಳೆಯನ್ನು ಹುರಿದು ಮುಕ್ಕಿದ ಕಾಮುಕರು