Select Your Language

Notifications

webdunia
webdunia
webdunia
webdunia

ದೇವೇಗೌಡರೇ ಯೋಗ ಮಾಡಿದ್ರೂ ಪುತ್ರ, ಸಿಎಂ ಕುಮಾರಸ್ವಾಮಿ ಗೈರಾದರು!

ದೇವೇಗೌಡರೇ ಯೋಗ ಮಾಡಿದ್ರೂ ಪುತ್ರ, ಸಿಎಂ ಕುಮಾರಸ್ವಾಮಿ ಗೈರಾದರು!
ಬೆಂಗಳೂರು , ಗುರುವಾರ, 21 ಜೂನ್ 2018 (10:20 IST)
ಬೆಂಗಳೂರು: ಇಂದು 4 ನೇ ವಿಶ್ವ ಯೋಗ ದಿನ. ಹಾಗಾಗಿ ಜೆಡಿಎಸ್ ವರಿಷ್ಠ ದೇವೇಗೌಡರು ತಮ್ಮ ನಿವಾಸದಲ್ಲಿ ಯೋಗಾಸ ಮಾಡಿದರು. ಆದರೆ ಪುತ್ರ, ಸಿಎಂ ಕುಮಾರಸ್ವಾಮಿ ಮಾತ್ರ ಯೋಗ ಕಾರ್ಯಕ್ರಮಕ್ಕೆ ಗೈರಾದರು.

ಪ್ರತೀವರ್ಷವೂ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದ ಸಿಎಂ ಈ ಬಾರಿ ಗೈರಾಗಿದ್ದಾರೆ. ಆದರೆ ದೇವೇಗೌಡರು ಪದ್ಮನಾಭನಗರದ ತಮ್ಮ ನಿವಾಸದಲ್ಲಿ ತಮ್ಮ ಯೋಗ ಗುರುವಿನ ಸಹಾಯದೊಂದಿಗೆ ಯೋಗಾಭ್ಯಾಸ ಮಾಡಿದ್ದಾರೆ.

ಬಳಿಕ ಮಾತನಾಡಿದ ದೇವೇಗೌಡರು ’ಯೋಗ ಎನ್ನುವುದು ನಮ್ಮ ಪೂರ್ವಿಕರಿಂದ ಬಂದ ಪರಂಪರೆ. ನನ್ನ 24 ನೇ ವಯಸ್ಸಿನಿಂದಲೂ 70-80 ಕಿ.ಮೀ. ಸೈಕಲ್ ತುಳಿಯುತ್ತಿದ್ದೆ. ಪ್ರತೀ ಶಾಲೆಯಲ್ಲೂ ಬೆಳಿಗ್ಗೆ ಸೂರ್ಯ ನಮಸ್ಕಾರ ಮಾಡಿಸಿ ಮಕ್ಕಳಿಗೆ ಯೋಗದ ಬಗ್ಗೆ ಅರಿವು ಮೂಡಿಸಬೇಕು’ ಎಂದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು