Publish Date: Tue, 09 Jun 2020 (20:00 IST)
Updated Date: Tue, 09 Jun 2020 (20:01 IST)
ಜೆಡಿಎಸ್ ಶಾಸಕಾಂಗ ಪಕ್ಷದ ತೀರ್ಮಾನದಂತೆ ರಾಜ್ಯಸಭೆಗೆ ಗಟ್ಟಿ ಮನಸ್ಸು ಮಾಡಿ ಸ್ಪರ್ಧೆ ಮಾಡುತ್ತಿರುವೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೇಳಿದ್ದಾರೆ.
ಜೆಡಿಎಸ್ ಅಭ್ಯರ್ಥಿಯಾಗಿ ರಾಜ್ಯಸಭೆ ಚುನಾವಣೆಗೆ ಸ್ಪರ್ಧೆ ಮಾಡಿರುವ ಹೆಚ್.ಡಿ.ದೇವೇಗೌಡರು, ಕಾರ್ಯಕರ್ತರನ್ನು ಉದ್ದೇಶಿಸಿ ಭಾವುಕರಾಗಿ ಮಾತನಾಡಿದ್ದಾರೆ.
ತಾವು ಎಂದೆಂದಿಗೂ ಜಾತ್ಯಾತೀತ ತತ್ವಕ್ಕೆ ಬದ್ಧವಾಗಿರುವುದಾಗಿ ಹೇಳಿದ್ದಾರೆ. ಪಕ್ಷದ ಶಾಸಕರ ಒತ್ತಡಕ್ಕೆ ಬೆಲೆ ಕೊಟ್ಟುರಾಜ್ಯ ಸಭೆಗೆ ಸ್ಪರ್ಧೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.