Publish Date: Mon, 09 Jul 2018 (18:50 IST)
Updated Date: Mon, 09 Jul 2018 (18:54 IST)
ಚಿರತೆ ಚರ್ಮ, ಜಿಂಕೆ ಕೊಂಬು, ಕಾಡೆಮ್ಮೆ ಕೊಂಬು ಸಾಗಿಸುತ್ತಿದ್ದ ಐವರು ಕಾಡುಕಳ್ಳರ ಬಂಧನ ಮಾಡಲಾಗಿದೆ.
ತರೀಕೆರೆ ತಾಲೂಕಿನ ಲಕ್ಕವಳ್ಳಿ ವನ್ಯಜೀವಿ ವಿಭಾಗ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಬಂಧಿತರಿಂದ ಲಕ್ಷಾಂತರ ಮೌಲ್ಯದ ಚಿರತೆ ಚರ್ಮ, ಆನೆ ದಂತ, ಜಿಂಕೆ ಕೋಡು ಮತ್ತು ಕಾಡೆಮ್ಮೆ ಕೊಂಬು ವಶ ಪಡಿಸಿಕೊಳ್ಳಲಾಗಿದೆ.
ತರೀಕೆರೆ ಪಟ್ಟಣದಲ್ಲಿ ಕಾರಿನಲ್ಲಿ ಸಾಗಿಸುವಾಗ ದಾಳಿ ನಡೆಸಿ ಬಂಧನ ಮಾಡಲಾಗಿದೆ. ದಕ್ಷಿಣ ಕನ್ನಡ ಮೂಲದ ಅಜೀಜ್ ಬೆಂಜಾಲ್, ಅಹಮ್ಮದ್ ಕುಹ್ನಿ ಹಾಗೂ ತರೀಕೆರೆ ಮೂಲದ ಮಂಜನಾಯ್ಕ, ಕುಮಾರ್ ನಾಯ್ಕ, ನಿಂಗ್ಯಾ ನಾಯ್ಕ ಬಂಧಿತ ಆರೋಪಿಗಳು. ಲಕ್ಕವಳ್ಳಿ ವನ್ಯಜೀವಿ ವಿಭಾಗದಲ್ಲಿ ಪ್ರಕರಣ ದಾಖಲು ಆಗಿದೆ.