Select Your Language

Notifications

webdunia
webdunia
webdunia
webdunia

ಕಡವೆ ಕೊಂದು ಮಾಂಸ ಮಾರಾಟ ಮಾಡುತ್ತಿದ್ದವರ ಬಂಧನ

ಕಡವೆ ಕೊಂದು ಮಾಂಸ ಮಾರಾಟ ಮಾಡುತ್ತಿದ್ದವರ ಬಂಧನ
ಕೊಲ್ಲೂರು , ಶುಕ್ರವಾರ, 7 ಸೆಪ್ಟಂಬರ್ 2018 (14:19 IST)
ಅಭಯಾರಣ್ಯದಲ್ಲಿ ಕಡವೆಗಳನ್ನು ಕೊಂದು ಅವುಗಳ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧನ ಮಾಡಲಾಗಿದೆ.

ಕುಂದಾಪುರದ ಮೂಕಾಂಬಿಕ ಅಭಯಾರಣ್ಯದ ಕೊಲ್ಲೂರು ವನ್ಯಜೀವಿ ವಲಯ ವ್ಯಾಪ್ತಿಯ ಜಡ್ಕಲ್ - ಮುದೂರು ಹೊಯ್ಗುಂಡಿಯಲ್ಲಿ ಅಂದಾಜು ಏಳು ವರ್ಷದ ಗಂಡು ಕಡವೆಯನ್ನು ಕೊಂದು ಮಾಂಸ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖಾಧಿಕಾರಿಗಳು ವಶಕ್ಕೆ ಪಡೆದಿದ್ದು ಇನ್ನಿಬ್ಬರು ಪರಾರಿಯಾಗಿದ್ದಾರೆ.

ಥಾಮಸ್ ಹಾಗೂ ಅಬ್ರಾಹಿಂ ಬಂಧಿತ ಆರೋಪಿಗಳಾಗಿದ್ದು, ಸದ್ಯ ಅವರು ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾರೆ.

ವನ್ಯಜೀವಿ ಅಭಯಾರಣ್ಯ ವಲಯದ ವ್ಯಾಪ್ತಿಗೊಳಪಡುವ ಮುದೂರು ಗ್ರಾಮದ ಹೋಯ್ಗುಂಡಿ ಎಂಬಲ್ಲಿನ ಹೊಳೆ ಪಕ್ಕದಲ್ಲಿ ಅಕ್ರಮವಾಗಿ ಮಾಂಸ ಮಾಡುತ್ತಿರುವ ವೇಳೆ ಆ ಭಾಗದಲ್ಲಿ ಗಸ್ತು ತಿರುತ್ತಿದ್ದ ಡೆಪ್ಯುಟಿ ಆರ್.ಎಫ್.ಒ (ಉಪ ವಲಯಾರಣ್ಯಾಧಿಕಾರಿ) ಸಿದ್ದೇಶ್ವರ್ ಹಾಗೂ ಸಿಬ್ಬಂದಿಗಳು ಮಾಂಸಕ್ಕಾಗಿ ಕಡಿದ ಕಡವೆ, ಉಪಯೋಗಿಸಿದ ಪರಿಕರಗಳ ಸಹಿತ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. 

ಈ ಕಾರ್ಯಾಚರಣೆಯಲ್ಲಿ ಡಿ.ಆರ್.ಎಫ್.ಒ ಸಿದ್ದೇಶ್ವರ್, ಅರಣ್ಯ ರಕ್ಷಕ ವಿವೇಕ್, ಅರಣ್ಯ ವೀಕ್ಷಕರಾದ ಸುರೇಂದ್ರ, ನವೀನ್ ಶೆಟ್ಟಿ ಮೊದಲಾದವರಿದ್ದರು.



Share this Story:

Follow Webdunia kannada

ಮುಂದಿನ ಸುದ್ದಿ

ಅರ್ಧಗಂಟೆ ಜೀವನ್ಮರಣದ ನಡುವೆ ಹೋರಾಡಿದ ವ್ಯಕ್ತಿ ಕೊನೆಗೂ ಬದುಕುಳಿದದ್ದು ಹೇಗೆ ಗೊತ್ತಾ?