Select Your Language

Notifications

webdunia
webdunia
webdunia
webdunia

ಸರ್ಕಾರಿ ಆಸ್ಪತ್ರೆಯಲ್ಲಿ ಖಾಸಗಿ ಕಂಪೆನಿಯ ಔಷಧಗಳ ಅಕ್ರಮ ಮಾರಾಟ ಪತ್ತೆ

ಸರ್ಕಾರಿ ಆಸ್ಪತ್ರೆಯಲ್ಲಿ ಖಾಸಗಿ ಕಂಪೆನಿಯ ಔಷಧಗಳ  ಅಕ್ರಮ ಮಾರಾಟ ಪತ್ತೆ
ರಾಯಚೂರು , ಶುಕ್ರವಾರ, 2 ಆಗಸ್ಟ್ 2019 (10:44 IST)
ರಾಯಚೂರು : ರಾಯಚೂರಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಖಾಸಗಿ ಕಂಪೆನಿಯ ಔಷಧಗಳು ಅಕ್ರಮವಾಗಿ ಮಾರಾಟವಾಗುತ್ತಿರುವುದು ಪತ್ತೆಯಾಗಿದೆ.




ರಾಯಚೂರಿನ ಸಿಂಧನೂರಿನಲ್ಲಿರೋ ಸರ್ಕಾರಿ ಆಸ್ಪತ್ರೆಯ ಜನರಿಕ್ ಮೆಡಿಸಿನ್ ಸೆಂಟರ್ ನಲ್ಲಿ ಖಾಸಗಿ ಕಂಪೆನಿಯ ಇಂಜೆಕ್ಷನ್ ಗಳು ಪತ್ತೆಯಾಗಿದೆ. ಶಾಸಕ ವೆಂಕಟರಾವ್ ನಾಡಗೌಡ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಅಕ್ರಮ ವ್ಯವಹಾರ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಖಾಸಗಿ ಕಂಪೆನಿಗಳ ಔಷಧಿಗಳನ್ನು ಜಪ್ತಿ ಮಾಡಿದ್ದಾರೆ.


ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಕಿಡಿಕಾರಿದ ಶಾಸಕ ವೆಂಕಟರಾವ್ ನಾಡಗೌಡ ಡಿಹೆಚ್ ಒ, ಜಿ.ಪಂ.ಸಿಇಒರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಔಷಧ ನಿಯಂತ್ರಣ ಇಲಾಖೆಗೆ ಸೂಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ನಾಯಕರ ಜೊತೆ ರಮೇಶ್ ಜಾರಕಿಹೊಳಿ ಫೋಟೊ!