ಶಾಂತಿಯುತವಾಗಿ ಟಿಪ್ಪು ಜಯಂತಿ ಆಚರಿಸಿ ಎಂದ ಜಿಲ್ಲಾಧಿಕಾರಿ

ಸೋಮವಾರ, 5 ನವೆಂಬರ್ 2018 (18:48 IST)
ಹಜರತ್ ಟಿಪ್ಪು ಸುಲ್ತಾನ್ ಅವರ ಜಯಂತಿಯನ್ನು ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ನಾಗರೀಕರು ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಂತ ರೀತಿಯಿಂದ ಜಯಂತಿ ಆಚರಿಸುವಂತೆ ಜಿಲ್ಲಾಧಿಕಾರಿ   ಮನವಿ ಮಾಡಿದರು.

ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಟಿಪ್ಪು ಸುಲ್ತಾನ ಜಯಂತಿ ಆಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ, ಟಿಪ್ಪು ಸುಲ್ತಾನ ಜಯಂತಿ ಹೆಸರಿನಲ್ಲಿ ಜಯಂತಿಯಂದು ಅಥವಾ ಜಯಂತಿಯ ನಂತರ ಖಾಸಗಿ ಕಾರ್ಯಕ್ರಮಗಳನ್ನು, ಬೈಕ್ ರ್ಯಾಲಿ, ಜಾಥಾ ಏರ್ಪಾಡು ಮಾಡಲು ಪರವಾನಿಗೆ ನೀಡಲಾಗುವುದಿಲ್ಲ. ಯಾವುದೇ ಸಂಸ್ಥೆ ಅಥವಾ ನಾಗರಿಕರು ಸರ್ಕಾರದಿಂದ ಆಚರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಯಾವುದೇ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಬೇಕೆಂದರು.

 ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ನಿಗದಿತ ಒಂದು ಸ್ಥಳದಲ್ಲಿ ಮಾತ್ರ ಹಜರತ ಟಿಪ್ಪು ಸುಲ್ತಾನ ಜಯಂತಿಯನ್ನು ಆಯೋಜಿಸಲಾಗುವುದು. ಜಿಲ್ಲೆಯಲ್ಲಿ ಕಳೆದ ವರ್ಷ ಶಾಂತಿಯುತವಾಗಿ ಜಯಂತಿ ಆಚರಿಸಲಾಗಿದೆ. ಈ ವರ್ಷವೂ ಎಲ್ಲ ಸಂಘ ಸಂಸ್ಥೆಗಳು ಒಗ್ಗೂಡಿ ಶಾಂತ ರೀತಿಯಿಂದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಜಯಂತಿಯನ್ನು ಆಚರಿಸಬೇಕು. ಕಲಬುರಗಿಯಲ್ಲಿ ನವೆಂಬರ್ 10 ರಂದು ಬೆಳಗಿನ 11 ಗಂಟೆಗೆ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಹಜರತ್ ಟಿಪ್ಪು ಸುಲ್ತಾನ ಜಯಂತಿ ಆಚರಿಸಲಾಗುವುದು ಎಂದರು.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಉಪಚುನಾವಣೆ ರಿಸಲ್ಟ್: ಕೌಂಟಿಂಗ್ ಗೆ ಕೌಂಡೌನ್