Select Your Language

Notifications

webdunia
webdunia
webdunia
webdunia

ತುಮಕೂರಿಗಿಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ

ತುಮಕೂರಿಗಿಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ
ತುಮಕೂರು , ಶುಕ್ರವಾರ, 16 ಜೂನ್ 2023 (10:45 IST)
ತುಮಕೂರು : ಜಿಲ್ಲೆಗೆ ಇಂದು(ಜೂ.16) ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ ನೀಡಲಿದ್ದು, ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಬೆಳಗ್ಗೆ 11.40ಕ್ಕೆ ಹಂದನಕೆರೆ ಹೆಲಿಪ್ಯಾಡ್ಗೆ ಡಿಕೆಶಿ ಆಗಮಿಸಲಿದ್ದು. ಬಳಿಕ ಹಂದನಕೆರೆ ಗುರುಗಿರಿ ಸಿದ್ದೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ನಂಜವದೂತ ಮಠಕ್ಕೆ ಭೇಟಿ ನೀಡಿ,

 ಸಂಜೆ 4 ಗಂಟೆಯವರೆಗೆ ನಂಜವದೂತ ಮಠದಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಅಲ್ಲಿಂದ ಸಂಜೆ 4:30 ಕ್ಕೆ ನಂಜವದೂತ ಮಠದ ಹೆಲಿಪ್ಯಾಡ್ ನಿಂದ ಬೆಂಗಳೂರಿನತ್ತ ಹೊರಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಲಸಿಗರಿದ್ದ ಹಡಗು ಮುಳುಗಡೆ – 79 ಮಂದಿ ಜಲಸಮಾಧಿ!