Select Your Language

Notifications

webdunia
webdunia
webdunia
Wednesday, 2 April 2025
webdunia

ವಲಸಿಗರಿದ್ದ ಹಡಗು ಮುಳುಗಡೆ – 79 ಮಂದಿ ಜಲಸಮಾಧಿ!

ಹಡಗು
ಅಥೆನ್ಸ್ , ಶುಕ್ರವಾರ, 16 ಜೂನ್ 2023 (10:37 IST)
ಅಥೆನ್ಸ್ : ಅಗತ್ಯಕ್ಕಿಂತ ಹೆಚ್ಚು ವಲಸಿಗರು ಪ್ರಯಾಣಿಸುತ್ತಿದ್ದ ಹಡಗು ಮುಳುಗಿ 79 ಮಂದಿ ಜಲಸಮಾಧಿಯಾಗಿದ್ದು, ನೂರಾರು ಮಂದಿ ನಾಪತ್ತೆಯಾಗಿರುವ ಘಟನೆ ಗ್ರೀಸ್ನ ಕರಾವಳಿ ಭಾಗದಲ್ಲಿ ನಡೆದಿದೆ.
 
ಜೂನ್ 14ರಂದು ರಾತ್ರಿ ಗ್ರೀಸ್ ಕರಾವಳಿಯಿಂದ ಯುರೋಪ್ನತ್ತ ಹೊರಟಿದ್ದ ಹಡಗಿನಲ್ಲಿ ನೂರಾರು ಮಂದಿ ಪ್ರಯಾಣಿಸುತ್ತಿದ್ದರು. ಮೀನುಗಾರಿಕೆ ಹಡಗಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜನರನ್ನ ಕೂರಿಸಿದ್ದರಿಂದ ಹಡಗು ಮುಳುಗಡೆಯಾಗಿದೆ ಎಂದು ತಿಳಿದುಬಂದಿದೆ. 

ಯುರೋಪಿಯನ್ ರಕ್ಷಣಾ ತಂಡದ ಪ್ರಕಾರ ಸುಮಾರು 750 ಮಂದಿ ಹಡಗಿನಲ್ಲಿದ್ದರು ಎನ್ನಲಾಗಿದೆ. ಆದ್ರೆ ಯುಎನ್ ವಲಸಿಗ ಏಜೆನ್ಸಿ 400 ಮಂದಿ ಹಡಗಿನಲ್ಲಿದ್ದರು ಎಂದು ಹೇಳಿದೆ. ಹಡಗಿನಲ್ಲಿದ್ದ ಹೆಚ್ಚಿನ ಸಂಖ್ಯೆಯ ವಲಸಿಗರು ಈಜಿಪ್ಟ್, ಸಿರಿಯಾ ಮತ್ತು ಪಾಕಿಸ್ತಾನದಿಂದ ಬಂದವರು ಎಂದು ಹೇಳಲಾಗಿದೆ.

ಗ್ರೀಸ್ನಲ್ಲಿ ನಡೆದ ಈ ಹಡಗು ದುರಂತವನ್ನು ಪ್ರಸಕ್ತ ವರ್ಷದ ಮಹಾ ದುರಂತ ಎಂದೇ ಹೇಳಲಾಗುತ್ತಿದೆ. ಸಮುದ್ರದಲ್ಲಿ ಮುಳುಗಿದ್ದ 104ಕ್ಕೂ ಹೆಚ್ಚು ಜನರನ್ನ ರಕ್ಷಿಸಲಾಗಿದೆ. ಇನ್ನೂ ಸಾಕಷ್ಟು ಮಂದಿ ನೀರಿನಲ್ಲಿ ಮುಳುಗಿದ್ದು ಅವರು ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಶವಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಂಡಮಾರುತದ ಅಬ್ಬರಕ್ಕೆ ಇಬ್ಬರು ಬಲಿ