Publish Date: Fri, 24 Jul 2020 (14:57 IST)
Updated Date: Fri, 24 Jul 2020 (14:58 IST)
ರಾಜಧಾನಿಯಲ್ಲಿ ಡೆಲಿವರಿ ಬಾಯ್ ಗಳ ಅಸಭ್ಯ ವರ್ತನೆ ಮತ್ತೆ ಮರುಕಳಿಸಿದೆ.
ವಸ್ತುವೊಂದನ್ನು ಡೆಲಿವರಿ ಕೊಡಲು ಬಂದ ಡೆಲಿವರಿ ಬಾಯ್ ವೊಬ್ಬನು ವಸ್ತುವಿಗೆ ಆರ್ಡರ್ ಮಾಡಿದ ಯುವತಿಯನ್ನೇ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ.
ಹಣ ತರಲು ಎಂದು ಮನೆಯೊಳಗೆ ಹೋದಾಗ ಯುವತಿಯ ಹಿಂಬದಿಯಿಂದ ಡೆಲಿವರಿ ಬಾಯ್ ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಯುವತಿ ದೂರು ದಾಖಲಿಸಿದ್ದಾಳೆ.
ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ಘಟನೆ ನಡೆದಿದ್ದು, ಡೆಲಿವರಿ ಬಾಯ್ ಅರುಣಕುಮಾರ ಎಂಬಾತ ಪರಾರಿಯಾಗಿದ್ದಾನೆ.