ಬಹು ನಿರೀಕ್ಷಿತ ಹಾಗೂ ಕುತೂಹಲ ಕೆರಳಿಸಿದ್ದ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಆಪ್ ಬಹುಮತ ಪಡೆದುಕೊಂಡಿದೆ.
	 
	ಆಪ್ ಗೆಲುವಿನಿಂದ ಸಹಜವಾಗಿಯೇ ಬಿಜೆಪಿ ಬಲ ಕುಗ್ಗಿದೆ. ಈ ನಡುವೆ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗಿದೆ. 
	ದೆಹಲಿ ಎಲೆಕ್ಷನ್ ರಿಸಲ್ಟ್ ಬಗ್ಗೆ ಹೇಳಿ ಅಂದ್ರೆ ಮಾಜಿ ಸಿಎಂ ಸಿದ್ದರಾಮಯ್ಯ ಫುಲ್ ಗರಂ ಆಗಿಬಿಟ್ಟಿದ್ದಾರೆ. 
	ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ನಾವೆಲ್ಲೂ ಹೇಳಿಕೊಂಡು ಭಾಷಣ ಮಾಡಿಲ್ಲ. ದೆಹಲಿಯಲ್ಲಿ ಎಷ್ಟು ಸೀಟ್ ಬಂದಿದೆ ಅನ್ನೋದು ಗೊತ್ತಿದೆ ಅಂತ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿ ಮುಂದೆ ನಡೆದರು.