ಮೇಕೆದಾಟು ಯೋಜನೆಯಲ್ಲಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಕೂಡಲೇ ಮೇಕದಾಟು ಯೋಜನೆ ಜಾರಿಯಾಗಬೇಕೆಂದು ಕನ್ನಡಪರ ಹೋರಾಟಗಾರರು ಸಂಗೋಳಿ ರಾಯಣ್ಣ ವೃತ್ತದಲ್ಲಿ ಧರಣಿ ನಡೆಸುತ್ತಿದ್ದಾರೆ.ಈ ಯೋಜನೆಯಿಂದ ರಾಜ್ಯದ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತದೆ.ಹಾಗಾಗಿ ಕನ್ನಡ ಪರ ಹಲವು ಸಂಘಟನೆಗಳಿಂದ ದೆಹಲಿ ಚಲೋವನ್ನ ಕೂಡ ಹಮ್ಮಿಕೊಳ್ಳಲಾಗಿದೆ.
ಸುಮಾರು 50 ಕ್ಕೂ ಹೆಚ್ಚು ಕನ್ನಡ ಪರ ಹೋರಾಟಗಾರರಿಂದ ದೆಹಲಿ ಚಲೋವನ್ನ ನಡೆಸಿದ್ದಾರೆ.ಬೆಂಗಳೂರು ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ನಿಂದ ದೆಹಲಿ ಚಲೋ ಆರಂಭವಾಗಿದ್ದು,ಬೆಂಗಳೂರಿನಿಂದ ರೈಲಿನಿಂದ ದೆಹಲಿಗೆ ಸುಮಾರು ೨೦೦ ಕ್ಕೂ ಹೆಚ್ಚು ಹೋರಾಟಗಾರರು ಪ್ರಯಾಣ ಬೆಳೆಸಿದ್ದಾರೆ.
ದೆಹಲಿಯ ಜಂತರ್ ಮಂತರ್ ನಲ್ಲಿ ಹೋರಾಟ ನಡೆಯಲಿದ್ದು, ನಾಳೆ ಮಧ್ಯಾಹ್ನ ಮೂರು ಗಂಟೆಗೆ ಕನ್ನಡ ಪರ ಹೋರಾಟಗಾರರಿಂದ ರಾಷ್ಟ್ರಪತಿಗಳಿಗೆ ಮೇಕೆದಾಟು ಯೋಜನೆಯ ಉಳಿವಿಗಾಗಿ ಮನವಿ ಮಾಡಲಿದ್ದಾರೆ.