ಹುತಾತ್ಮ ಯೋಧ ಗುರು ಸ್ಮಾರಕ ನಿರ್ಮಾಣ ವಿಳಂಬ; ಸಿಎಂ ಗೆ ಪತ್ರ ಬರೆದ ಮಾಜಿ ಸಿಎಂ

ಭಾನುವಾರ, 16 ಫೆಬ್ರವರಿ 2020 (11:04 IST)
ಬೆಂಗಳೂರು : ಹುತಾತ್ಮ ಯೋಧ ಗುರು ಸ್ಮಾರಕ ನಿರ್ಮಾಣ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಪತ್ರವೊಂದನ್ನು ಬರೆದಿದ್ದಾರೆ.


ಪುಲ್ವಾಮಾ ದಾಳಿಯಲ್ಲಿ ಮಡಿದ ಮಂಡ್ಯದ ಯೋಧ ಗುರುವಿನ ಚಿತಾಭಸ್ಮ ಇನ್ನೂ ಶಾಸ್ತ್ರೋಕ್ತವಾಗಿ ವಿಸರ್ಜನೆಯಾಗಲಿಲ್ಲ. ಹಾಗೂ ಅವರ ಸಮಾಧಿಯನ್ನು ಸ್ಮಾರಕವಾಗಿ ನಿರ್ಮಾಣ ಮಾಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ.


ಈ ಹಿನ್ನಲೆಯಲ್ಲಿ ಸಿಎಂಗೆ ಪತ್ರ ಬರೆದ ಮಾಜಿ ಸಿಎಂ ಎಸ್.ಎಂ.ಕೃಷ್ಣ,  ಗುರು ಚಿತಾಭಸ್ಮ ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡುವಂತೆ ಸಿಎಂಗೆ ಮನವಿಮಾಡಿದ್ದಾರೆ. ಮಾತ್ರವಲ್ಲದೇ  ಶೀಘ್ರವೇ ಸ್ಮಾರಕ ನಿರ್ಮಾಣ ಮಾಡುವಂತೆ, ಈ ಬಗ್ಗೆ ಜಿಲ್ಲಾಡಳಿತಕ್ಕೆ ಸೂಚನೆ ನೀಡುವಂತೆ ಸಿಎಂ ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ ಓವೈಸಿ