Select Your Language

Notifications

webdunia
webdunia
webdunia
webdunia

ಬಳ್ಳಾರಿಯಲ್ಲಿ ಸೋಲು; ಜನಾರ್ಧನರೆಡ್ಡಿಗೆ ಬಳ್ಳಾರಿ ಜನರು ನೀಡಿದ ಶಾಪವೆಂದ ಸಿದ್ದರಾಮಯ್ಯ

ಬಳ್ಳಾರಿಯಲ್ಲಿ ಸೋಲು; ಜನಾರ್ಧನರೆಡ್ಡಿಗೆ ಬಳ್ಳಾರಿ ಜನರು ನೀಡಿದ ಶಾಪವೆಂದ ಸಿದ್ದರಾಮಯ್ಯ
ಬೆಂಗಳೂರು , ಮಂಗಳವಾರ, 6 ನವೆಂಬರ್ 2018 (13:14 IST)
ಬೆಂಗಳೂರು : ಪಂಚ ಕ್ಷೇತ್ರಗಳ ಉಪಚುನಾವಣೆಯಲ್ಲಿ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಕೂಟ ಭರ್ಜರಿ ಗೆಲುವು ಸಾಧಿಸಿದೆ. ಅದರಲ್ಲಿ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ವಿ.ಎಸ್. ಉಗ್ರಪ್ಪ ಗೆಲುವು ಸಾಧಿಸುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಜನಾರ್ಧನರೆಡ್ಡಿಗೆ ಟಾಂಗ್ ನೀಡಿದ್ದಾರೆ.


ಜನಾರ್ದನ ರೆಡ್ಡಿ ಅವರು, ‘ನನ್ನನ್ನು 4 ವರ್ಷ ಜೈಲಿನಲ್ಲಿ ಕೊಳೆಯುವಂತೆ ಮಾಡಿ, ನನ್ನ ಪುಟ್ಟ ಮಕ್ಕಳಿಂದ ದೂರ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಅವರ ಹಿರಿಯ ಪುತ್ರ ರಾಕೇಶ್ ಸಾವಿನ ಮೂಲಕ ದೇವರು ಶಿಕ್ಷೆ ನೀಡಿದ್ದಾನೆ ಎಂದು ಹೇಳಿಕೆ ನೀಡಿದ್ದರು.


ಈ ಬಗ್ಗೆ ಇದೀಗ  ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು,ಬಳ್ಳಾರಿಯ ಜನತಾ ಜನಾರ್ಧರಿಗೆ ಧನ್ಯವಾದಗಳು ತಿಳಿಸಿದ್ದಾರೆ. ಜೊತೆಗೆ ಜನಾರ್ಧನರೆಡ್ಡಿಯವರ ಅಮಾನವೀಯ ನಡೆ ನುಡಿಗೆ ಬಳ್ಳಾರಿ ಜನರೇ ಶಾಪ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪಂಚ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ; ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಜಯ