Select Your Language

Notifications

webdunia
webdunia
webdunia
webdunia

10 ಕೋಟಿ ಆಫರ್ ತಿರಸ್ಕರಿಸಿದ ನಟ ನೀನಾಸಂ ಸತೀಶ್. ಕಾರಣವೇನು ಗೊತ್ತಾ?

10 ಕೋಟಿ ಆಫರ್ ತಿರಸ್ಕರಿಸಿದ ನಟ ನೀನಾಸಂ ಸತೀಶ್. ಕಾರಣವೇನು ಗೊತ್ತಾ?
ಬೆಂಗಳೂರು , ಮಂಗಳವಾರ, 6 ನವೆಂಬರ್ 2018 (09:08 IST)
ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಬಾರೀ ಡಿಮ್ಯಾಂಡ್ ಇರುವ ನಟರಲ್ಲಿ ನೀನಾಸಂ ಸತೀಶ್ ಕೂಡ ಒಬ್ಬರು, ಇದೀಗ ಅವರು  ನಟಿಸಿದ ‌ ಚಂಬಲ್ ಚಿತ್ರಕ್ಕೆ 10 ಕೋಟಿ ಆಫರ್ ಬಂದರೂ ಅದನ್ನು ತಿರಸ್ಕರಿಸಿದ್ದಾರಂತೆ.


ಹೌದು. ಲೂಸಿಯಾ ಚಿತ್ರದಲ್ಲಿ ನಟಿಸುವುದರ ಮೂಲಕ ಜನರಲ್ಲಿ ಭರವಸೆಯನ್ನು ಮೂಡಿಸಿದ ನಟ ನೀನಾಸಂ ಸತೀಶ್‌ ಅವರು ನಂತರ ಸ್ಯಾಂಡಲ್ ವುಡ್ ನ ಲವ್ ಇನ್ ಮಂಡ್ಯ, ಕ್ವಾಟ್ಲೆ ಸತೀಶ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಜನರ ಮನಗೆದ್ದಿದ್ದಾರೆ. ಇತ್ತೀಚಿಗೆ ತೆರೆಕಂಡ ಸತೀಶ್ ನಟನೆಯ ಅಯ್ಯೋಗ ಚಿತ್ರ ಅವರ ಡಿಮ್ಯಾಂಡ್ ಇನ್ನಷ್ಟು  ಹೆಚ್ಚಾಗುವಂತೆ ಮಾಡಿತ್ತು.


ಇದೀಗ ನೀನಾಸಂ ಸತೀಶ್ ಅವರ ಮುಂದಿನ ಸಿನಿಮಾ‌ ಚಂಬಲ್ ರಿಲೀಸ್ ಗೂ ಮೊದಲ್ಲೇ ಭಾರಿ ಬೇಡಿಕೆ ಇದೆ. ನೆಟ್‍ಫ್ಲಿಕ್ಸ್ ನವರು 10 ಕೋಟಿ ರೂ. ಕೊಟ್ಟು ಈ ಚಿತ್ರವನ್ನು ಖರೀದಿ ಮಾಡಲು ಮುಂದಾಗಿದ್ದಾರೆ. ಆದರೆ ಈ ಆಫರ್‍ ಅನ್ನು ನೀನಾಸಂ ಸತೀಶ್ ತಿರಸ್ಕರಿಸಿದ್ದಾರೆ. ಕಾರಣ ನೆಟ್‍ಫ್ಲಿಕ್ಸ್ ನವರು ಈ ಚಿತ್ರವನ್ನು ಖರೀದಿಸಿದ ನಂತರ ಥಿಯೇಟರುಗಳಿಗೆ ರಿಲೀಸ್ ಮಾಡಬಾರದು ಅನ್ನೋ ಷರತ್ತು ಹಾಕಿದೆ. ಇದು ನಟ ಸತೀಶ್‍ ಅವರಿಗೆ ಇಷ್ಟವಾಗದೇ ಇರುವುದರಿಂದ ಈ ಆಫರ್ ಬೇಡ ಎಂದಿದ್ದಾರಂತೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೀರ್ತಿ ಗೌಡ ಮೇಲೆ ಹಲ್ಲೆ ಪ್ರಕರಣ; ನಾಗರತ್ನ ಗೆ ಮಧ್ಯಂತರ ನಿರೀಕ್ಷಣಾ ಜಾಮೀನು