Daily Horoscope
✕

ಕಾರು ಡಿಕ್ಕಿಯಾಗಿ ಜಿಂಕೆ ಸಾವು: ಕಳಚಿದ ಲೋಗೋದಿಂದ ಸಿಕ್ಕ ಸುಳಿವು

Webdunia
ಸೋಮವಾರ, 14 ಜನವರಿ 2019 (12:11 IST)
ರಸ್ತೆ ದಾಟುತ್ತಿದ್ದ ಜಿಂಕೆಗೆ ಬೆಂಜ್ ಕಾರೊಂದು ಡಿಕ್ಕಿಯಾಗಿ ಪರಾರಿಯಾಗಿರುವ ಘಟನೆ ತಡರಾತ್ರಿ ನಡೆದಿದೆ.
ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗೇಟ್ ಬಳಿ ಈ ಘಟನೆ ನಡೆದಿದೆ.

ಸುಮಾರು 4 ವರ್ಷದ ಹೆಣ್ಣು ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಡಿಕ್ಕಿಯ ರಭಸಕ್ಕೆ ಬೆಂಜ್ ಕಾರಿನ ಲೋಗೋ ಕೆಳಗೆ ಬಿದ್ದಿದ್ದರಿಂದ ಪೊಲೀಸರಿಗೆ ಕಾರು ಪತ್ತೆಹಚ್ಚಲು ಮಹತ್ವದ ಸುಳಿವು ಸಿಕ್ಕಂತಾಗಿದೆ.

ಈ ಘಟನೆ ಕುರಿತು ಬಂಡೀಪುರ ಸಿಎಫ್ಓ ಅಂಬಾಡಿ ಮಾಧವನ್ ಪ್ರತಿಕ್ರಿಯಿಸಿದ್ದು, ಕಾರಿನ ಲೋಗೋ ಕಳಚಿ ಬಿದ್ದಿರುವುದರಿಂದ ಬೆಂಜ್ ಕಾರ್ ಎಂದು ತಿಳಿದುಬಂದಿದೆ. ಈಗಾಗಲೇ ಪೊಲೀಸರು ಸಿಸಿ ಕ್ಯಾಮರಾಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.  

ಇಂದು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ನೆರವೇರಿಸಲಿದ್ದು, ಆರೋಪಿಯನ್ನು ಶೀಘ್ರದಲ್ಲೇ ಪತ್ತೆಹಚ್ಚಲಾಗುವುದು ಎಂದು ತಿಳಿಸಿದರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ವಿಜಯೇಂದ್ರ ಸವಾಲು

ಮಂಡ್ಯದಲ್ಲಿ ದಿಢೀರ್ ಬಸ್ ಅಡ್ಡಗಟ್ಟಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ಯುವಕ Video

ಆಭರಣ ಪ್ರಿಯರಿಗೆ ಮಹತ್ವದ ಮಾಹಿತಿ: ಬೆಂಗಳೂರು ಮತ್ತು ಕರ್ನಾಟಕದಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿ ದರ

20 ನಿಮಿಷ ಚರಂಡಿಯಲ್ಲಿ ಒದ್ದಾಡಿದರೂ ರಕ್ಷಣೆಗೆ ಬಾರದ ಜನ; ಸಿಸಿಟಿವಿಯಲ್ಲಿ ಸೆರೆಯಾಯಿತು ಭೀಕರ ಸಾವಿನ ದೃಶ್ಯ Video

ಎಲ್ರೂ ದಾಟಿದ್ರಾ… ತನ್ನವರ ಬಳಗದ ಮೇಲೆ ಆನೆಗೆ ಎಂಥಾ ಪ್ರೀತಿ..: ವೈರಲ್ Video

ಮುಂದಿನ ಸುದ್ದಿ
Show comments