ಮುಂಬೈ: ಬಾಲಿವುಡ್ ನಟ ರಣವೀರ್ ಅವರು ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದ ಡೀಪ್ ಫೇಕ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾತ್ತಿದ್ದು, ಇದೀಗ ನಟ ಸೈಬರ್ ಅಪರಾಧ ವಿಭಾಗದಲ್ಲಿ ದೂರು ದಾಖಲಿಸಿದ್ದಾರೆ.
ವಾರಾಣಸಿಗೆ ನಟ ರಣವೀರ್ ಸಿಂಗ್ ಅವರು ಭೇಟಿ ನೀಡಿದ್ದ ವೇಳೆ ಎಎನ್‌ಐ ನೀಡಿದ ವರದಿಯನ್ನು ಕೃತಕ ಬುದ್ಧಿಮತ್ತೆ ಮೂಲಕ ತಿರುಚಿ ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದಂತೆ ವಿಡಿಯೋವನ್ನು ಹರಿಬಿಡಲಾಗಿದೆ.
ಈ ಬಗ್ಗೆ ಅಭಿಮಾನಿಗಳಗೆ ಮಾಹಿತಿ ನೀಡಿದ್ದ ರಣವೀರ್ ಡೀಪ್ ಫೇಕ್ ಬಗ್ಗೆ ಜಾಗರೂಕರಾಗಿರಿ ಸ್ನೇಹಿತರೆ ಎಂದು ಹೇಳಿದ್ದರು.
ಡೀಪ್ ಫೇಕ್ ವಿಡಿಯೊದಲ್ಲಿ ನಟ ರಣವೀರ್ ಸಿಂಗ್ ಹೇಳಿಕೆಯನ್ನು ಹೀಗೇ ತಿರುಚಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರದ ವೇಳೆ ನೀಡಿರುವ ಭರವಸೆಗಳನ್ನು ಈಡೇರಿಸಲು ವಿಫಲರಾಗಿದ್ದಾರೆ, ಎರಡು ಬಾರಿ ಪ್ರಧಾನಿಯಾಗಿದ್ದರೂ ದೇಶದ ಕಳಪೆ ಆರ್ಥಿಕತೆಯನ್ನು ಸುಧಾರಿಸಲಿಲ್ಲ ಎಂದು ಟೀಕಿಸಿರುವ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿ ಎಂದು ಹೇಳಿದಂತೆ ವಿಡಿಯೊವನ್ನು ತಿರುಚಲಾಗಿದೆ.