Publish Date: Fri, 24 Aug 2018 (20:00 IST)
Updated Date: Fri, 24 Aug 2018 (20:03 IST)
ಶ್ರೀ ವರ ಮಹಾಲಕ್ಷ್ಮಿ ಹಬ್ಬಕ್ಕೆ ಚಾಮುಂಡೇಶ್ವರಿಗೆ ನೋಟುಗಳಿಂದ ಸಿಂಗಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು.
ಶ್ರೀ ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ಬೀದಿಯಲ್ಲಿನ ಶ್ರೀಚಾಮುಂಡೇಶ್ವರಿ ತಾಯಿಗೆ ನೋಟುಗಳಿಂದ ಸಿಂಗರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.
ಅರ್ಚಕರಾದ ಲಕ್ಷ್ಮೀಶ್ ಅವರು, ಭಕ್ತರು ಸಿಂಗಾರಕ್ಕೆಂದು ನೀಡಲಾಗಿದ್ದ 5 ಲಕ್ಷ ರೂ.ಗಳನ್ನು ಬಗೆ ಬಗೆಯಾಗಿ ಅಲಂಕರಿಸಿ ವಿಶೇಷ ರೀತಿಯಲ್ಲಿ ದೇವಿಯನ್ನು ಆರಾಧಿಸಿದರು.
2000, 500, 200, 100, 50, 20, 10 ಹಾಗೂ 5 ರೂ.ಗಳ ನೋಟುಗಳ ಸಿಂಗಾರ ಭಕ್ತರ ಮನ ಪುಳಕಗೊಳ್ಳುವಂತೆ ಮಾಡಿತು. ಈ ಅಪರೂಪದ ಚಿತ್ರಣವನ್ನು ಕಣ್ತುಂಬಿಕೊಂಡ ಭಕ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.