Publish Date: Sat, 11 May 2019 (13:28 IST)
Updated Date: Sat, 11 May 2019 (13:30 IST)
ಕಾಡಿನಲ್ಲಿರುವ ಆನೆಯೊಂದು ನರಕಯಾತನೆ ಅನುಭವಿಸುತ್ತಿದೆ.
ಕಾಡಾನೆಯ ಮುಂಭಾಗದ ಎಡ ಕಾಲು ಮುರಿದ ಪರಿಣಾಮ ನರಕಯಾತನೆ ಅನುಭವಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಬಾಳುಗೋಡು ಎಂಬಲ್ಲಿ ಘಟನೆ ನಡೆದಿದೆ.
ಗಂಡು ಕಾಡಾನೆಯ ಎಡ ಕಾಲು ಮುರಿದುಕೊಂಡು ನಿಲ್ಲಲು ಆಗದೆ ನರಕಯಾತನೆ ಪಡುತ್ತಿದೆ. ಕಾಡಾನೆಯ ನರಕಯಾತನೆ ದೃಶ್ಯ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ ಊರಿನ ಗ್ರಾಮಸ್ಥರು.
ಕುಕ್ಕೇ ಸುಬ್ರಹ್ಮಣ್ಯ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಕಾಡಾನೆ ಇದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಕಾಡಾನೆಗೆ ಚಿಕಿತ್ಸೆ ನೀಡಲು ನಾಗರಹೊಳೆಯಿಂದ ವೈದ್ಯರನ್ನು ಕರೆಸಿಕೊಂಡಿದ್ದಾರೆ ಅರಣ್ಯ ಅಧಿಕಾರಿಗಳು.