Select Your Language

Notifications

webdunia
webdunia
webdunia
webdunia

ರಸ್ತೆ ಸೂಪರ್ ಆಗಿರೋದ್ರಿಂದ ಅಪಘಾತಗಳು ಹೆಚ್ಚುತ್ತಿವೆ ಎಂದ ಡಿಸಿಎಂ

ರಸ್ತೆ ಸೂಪರ್ ಆಗಿರೋದ್ರಿಂದ ಅಪಘಾತಗಳು ಹೆಚ್ಚುತ್ತಿವೆ ಎಂದ ಡಿಸಿಎಂ
ಚಿತ್ರದುರ್ಗ , ಬುಧವಾರ, 11 ಸೆಪ್ಟಂಬರ್ 2019 (16:19 IST)
ದೇಶದಲ್ಲಿ ಸುರಕ್ಷತೆ ದೃಷ್ಟಿಯಿಂದ ವಾಹನ ಕಾಯ್ದೆ ತಿದ್ದುಪಡಿ ತರಲಾಗಿದೆ. ಪ್ರತಿದಿನ 10 ಸಾವಿರ ರಸ್ತೆ ಅಪಘಾತಗಳು ನಡೆಯುತ್ತಿವೆ. ನಮ್ಮಲ್ಲೂ ರಸ್ತೆಗಳು ಚೆನ್ನಾಗಿರೋ ಕಾರಣದಿಂದ ಅಪಘಾತ ಹೆಚ್ಚಾಗುತ್ತಿವೆ. ರಸ್ತೆಗಳು ಅಭಿವೃದ್ಧಿಯಾಗಿ ಅಪಘಾತಗಳು ಹೆಚ್ಚಾಗುತ್ತಿವೆ ಹೀಗಂತ ಡಿಸಿಎಂ ಹೇಳಿಕೆ ನೀಡಿದ್ದು, ವಿವಾದಕ್ಕೆ ಈಡಾಗುತ್ತಿದೆ.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದು, ಗುಜರಾತ್ ಮಾದರಿಯಲ್ಲಿ ದಂಡ ವಿನಾಯಿತಿ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ದುಬಾರಿ ದಂಡಕ್ಕೆ ನನ್ನ ಸಹಮತವೂ ಇಲ್ಲ, ನಾನು ವಿರೋಧಿಸುತ್ತೇನೆ ಅಂತಂದ ಡಿಸಿಎಂ, ರಸ್ತೆಗಳು ಸರಿ ಇರೋ ಕಾರಣದಿಂದಲೇ ಅಪಘಾತಗಳು ಹೆಚ್ಚಾಗುತ್ತಿವೆ ಅಂತ
ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದುಬಾರಿ ದಂಡ ವಿರೋಧಿಸುತ್ತೇನೆ, ಆದ್ರೆ ರಸ್ತೆ ಸುರಕ್ಷತೆ ಇಲ್ಲ ಅನ್ನೋದು ಒಪ್ಪೋದಿಲ್ಲ. ಹೀಗಂತ
ಚಿತ್ರದುರ್ಗ ಜಿಲ್ಲೆಯ ಚಿತ್ರಹಳ್ಲಿಯಲ್ಲಿ ಹೇಳಿಕೆ ನೀಡಿದ್ದಾರೆ ಡಿಸಿಎಂ ಗೋವಿಂದ ಕಾರಜೋಳ.




Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಂಬೆಳಗ್ಗೆ ತಾಯಿ - ಮಗಳು, ಮಗನ ಕಥೆ ಏನಾಯ್ತು?