Publish Date: Wed, 11 Sep 2019 (16:12 IST)
Updated Date: Wed, 11 Sep 2019 (16:15 IST)
ಬಟ್ಟೆ ಹಾಕುತ್ತಿದ್ದ ತಾಯಿ – ಮಗಳ ಕಥೆ ದಾರುಣ ಅಂತ್ಯಕಂಡಿದೆ.
ವಿದ್ಯುತ್ ಶಾಕ್ ಹೊಡೆದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿಯ ಅಗಸರಹಳ್ಳಿಯಲ್ಲಿ ಘಟನೆ ನಡೆದಿದೆ.
ಮೃತರು ತಾಯಿ ಭಾಗ್ಯಮ್ಮ, ಮಗಳು ದಾಕ್ಷಾಯಿಣಿ, ಮಗ ದಯಾನಂದ ಎಂದು ಗುರ್ತಿಸಲಾಗಿದೆ.
ಮಗಳು ದಾಕ್ಷಾಯಿಣಿ ಬೆಳಗ್ಗೆ ಒಗೆದ ಬಟ್ಟೆಗಳನ್ನ ಮನೆಯಿಂದ ವಿದ್ಯುತ್ ಕಂಬಕ್ಕೆ ಕಟ್ಟಲಾಗಿದ್ದ ತಂತಿಗೆ ಬಟ್ಟೆ ಒಣ ಹಾಕಲು ಹೋದಾಗ ತಂತಿಯಲ್ಲಿ ಪ್ರಸರಿಸುತ್ತಿದ್ದ ವಿದ್ಯುತ್ ಮೊದಲಿಗೆ ದಾಕ್ಷಾಯಣಿಯನ್ನು ಹಿಡಿದುಕೊಂಡಿದೆ.
ಇದನ್ನು ನೋಡಿ ಗಾಬರಿಯಿಂದ ತಾಯಿ, ಮಗ ಅವಳನ್ನು ಬಿಡಿಸಲು ಹೋಗಿದ್ದಾರೆ.
ಅವಳನ್ನು ಮುಟ್ಟಿದ ಇಬ್ಬರಿಗೂ ವಿದ್ಯುತ್ ಶಾಕ್ ಹೊಡೆದು ಮೂವರು ಸಾವನ್ನಪ್ಪಿದ್ದಾರೆ.