Publish Date: Wed, 11 Sep 2019 (15:44 IST)
Updated Date: Wed, 11 Sep 2019 (15:46 IST)
ಕೈ ಪಡೆಯ ನಾಯಕ ಡಿಕೆ ಶಿವಕುಮಾರ ವಿಚಾರದಲ್ಲಿ ದಯವಿಟ್ಟು ನನಗೆ ಪ್ರಶ್ನೆ ಕೇಳಬೇಡಿ. ಹೀಗಂತ ಮಾಧ್ಯಮದವರಲ್ಲಿ ಉಪಮುಖ್ಯಮಂತ್ರಿ ಹೇಳಿರೋ ಘಟನೆ ನಡೆದಿದೆ.
ಡಿಕೆ ಶಿವಕುಮಾರರನ್ನು ಇಡಿ ಬಂಧಿಸಿ ವಿಚಾರಣೆ ನಡೆಸುತ್ತಿದೆ. ಈ ವಿಚಾರದ ಬಗ್ಗೆ ಮಾತಾಡಬೇಡಿ ಅಂತ
ಡಿಸಿಎಂ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದಾರೆ.
ಕಾನೂನು ತನ್ನ ಕೆಲಸ ತಾನು ಮಾಡಿಕೊಂಡು ಬರುತ್ತಿದೆ. ಇಡಿ, ಸಿಬಿಐ ತನ್ನ ಕೆಲಸ ತಾನು ಮಾಡುತ್ತಿದೆ.
ಬಿಜೆಪಿಗೂ ಇಡಿ ಗೂ ಸಂಬಂಧವಿಲ್ಲ. ಹೀಗಂತ ಚಿತ್ರದುರ್ಗ ಜಿಲ್ಲೆಯ ಚಿತ್ರಹಳ್ಳಿಯಲ್ಲಿ ಹೇಳಿಕೆ ನೀಡಿದ್ದಾರೆ ಡಿಸಿಎಂ ಗೋವಿಂದ ಕಾರಜೋಳ.
Jagadeesh
Publish Date: Wed, 11 Sep 2019 (15:44 IST)
Updated Date: Wed, 11 Sep 2019 (15:46 IST)