ಬಿಜೆಪಿ ಪರ ಮತ್ತೆ ಬ್ಯಾಟ್ ಬೀಸಿದ ಸುಮಲತಾ

ಬುಧವಾರ, 11 ಸೆಪ್ಟಂಬರ್ 2019 (14:46 IST)
ರಾಜ್ಯದಲ್ಲಿ ರಾಜಕೀಯ ತಿರುವು ಪಡೆದುಕೊಳ್ಳುತ್ತಿರುವಂತೆ ಸಂಸದೆ ಸುಮಲತಾ ಮತ್ತೆ ಬಿಜೆಪಿ ಪರ ಬ್ಯಾಟ್ ಬೀಸಿದ್ದಾರೆ.

ರಾಜ್ಯ ಸರಕಾರ ಶೀಘ್ರದಲ್ಲಿಯೇ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡುತ್ತದೆ ಅಂತ ಮಂಡ್ಯ ಸಂಸದೆ ಸುಮಲತಾ ಭರವಸೆ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ಸಂಸದರ ಕಚೇರಿ ಉದ್ಘಾಟಿಸಿ ಮಾತನಾಡಿದ ಸುಮಲತಾ, ಅಂಬರೀಶ್ ಅವರಿದ್ದ ಆಫೀಸ್ ನ್ನೇ ಕಛೇರಿಯನ್ನಾಗಿ ಮಾಡಲಾಗಿದೆ. ಅದರಲ್ಲಿ ಕುಳಿತು ಕೆಲಸ ಮಾಡೋದು ನನ್ನ ಸೌಭಾಗ್ಯವಾಗಿದೆ ಅಂತ ಹೇಳಿದ್ದಾರೆ.

ರಾಜಕೀಯವಾಗಿ ತಮ್ಮ ಹೆಸರನ್ನು ಡ್ಯಾಮೇಜ್ ಮಾಡಲು ಪ್ರಭಾವಿಗಳು ಫೇಸ್ ಬುಕ್ ಅಕೌಂಟ್ ನಕಲಿ ಮಾಡಿ ಬಳಸುತ್ತಿದ್ದಾರೆ ಅಂತ ಸಂಸದೆ ಸುಮಲತಾ ಹೇಳಿಕೊಂಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪಾಕಿಸ್ತಾನಕ್ಕೆ ಬಿಸಿ, ಚಳಿ ಮುಟ್ಟಿಸ್ತಿರೋ ಹಾಲಿನ ರೇಟ್