Publish Date: Tue, 04 Sep 2018 (11:19 IST)
Updated Date: Tue, 04 Sep 2018 (11:21 IST)
ಬೆಂಗಳೂರು: ತಮ್ಮ ಶೂ, ಬಟ್ಟೆ ಕೊಳೆಯಾಯಿತೆಂದು ಗನ್ ಮ್ಯಾನ್ ಕೈಯಲ್ಲಿ ಶುಚಿಗೊಳಿಸಿ ಇದೀಗ ಡಿಸಿಎಂ ಪರಮೇಶ್ವರ್ ವಿವಾದಕ್ಕೀಡಾಗಿದ್ದಾರೆ.
ಇಂದು ತಮ್ಮ ಬೆಂಬಲಿಗರೊಂದಿಗೆ ಸಿಟಿ ರೌಂಡ್ಸ್ ಮಾಡುತ್ತಿದ್ದ ಡಿಸಿಎಂ ಪರಮೇಶ್ವರ್ ರಾಜಾಕಾಲುವೆ ಬಳಿ ಪರಿಶೀಲನೆ ನಡೆಸುತ್ತಿದ್ದಾಗ ಕೊಳಚೆ ನೀರು ಶೂ ಮತ್ತು ಪ್ಯಾಂಟ್ ಮೇಲೆ ಬಿತ್ತು.
ತಕ್ಷಣ ಅಲ್ಲಿದ್ದ ಕಾರ್ಯಕರ್ತರು ಪರಮೇಶ್ವರ್ ಶೂ ಶುಚಿ ಮಾಡಲು ಮುಂದಾಗುತ್ತಾರೆ. ಆದರೆ ಡಿಸಿಎಂ ಪರಮೇಶ್ವರ್ ತಮ್ಮ ಭದ್ರತಾ ಸಿಬ್ಬಂದಿಗೆ ಶೂ, ಬಟ್ಟೆ ಶುಚಿ ಮಾಡಲು ನಿರ್ದೇಶನ ನೀಡುತ್ತಾರೆ. ಡಿಸಿಎಂ ಪರಮೇಶ್ವರ್ ಆದೇಶಕ್ಕೆ ತಲೆಬಾಗಿ ಭದ್ರತಾ ಸಿಬ್ಬಂದಿಗಳು ಶೂ ಶುಚಿಗೊಳಿಸುತ್ತಾರೆ. ಈ ವಿಡಿಯೋಗಳು ಇದೀಗ ಖಾಸಗಿ ವಾಹಿನಿಯಲ್ಲಿ ವೈರಲ್ ಆಗಿದ್ದು, ಟೀಕೆಗೆ ಗುರಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.