Select Your Language

Notifications

webdunia
webdunia
webdunia
webdunia

ಈ ಜಿಲ್ಲೆಯಲ್ಲಿನ ಕೊರೊನಾಕ್ಕೆ 660 ಬೆಡ್ ಎಂದ ಡಿಸಿಎಂ

ಈ ಜಿಲ್ಲೆಯಲ್ಲಿನ ಕೊರೊನಾಕ್ಕೆ  660 ಬೆಡ್ ಎಂದ ಡಿಸಿಎಂ
ರಾಮನಗರ , ಭಾನುವಾರ, 28 ಜೂನ್ 2020 (17:42 IST)
ರಾಜ್ಯದ ಈ ಜಿಲ್ಲೆಯಲ್ಲಿ ಕಂಡು ಬರುತ್ತಿರುವ ಕೊರೊನಾ ಕೇಸ್ ನಿಗ್ರಹಕ್ಕೆ 660 ಬೆಡ್ ಗಳನ್ನು ಸಿದ್ಧಪಡಿಸಲಾಗಿದೆ.

ವ್ಯಾಪಕವಾಗಿ ಹರಡುತ್ತಿರುವ ಕೋವಿಡ್- 19 ಸೋಂಕಿನಿಂದ ಎದುರಾಗುವ ಯಾವುದೇ ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸಲು ರಾಮನಗರ ಜಿಲ್ಲಾಡಳಿತ ಸರ್ವಸಿದ್ಧವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಜಿಲ್ಲೆಯ ರೋಗಿಗಳಿಗೆಗೆ ಮೀಸಲಾಗಿರುವ ಎರಡು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೆಂಗೇರಿಯಲ್ಲಿರುವ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಆಸ್ಪತ್ರೆ, ಕನಕಪುರ ರಸ್ತೆಯ ಹಾರೋಹಳ್ಳಿ ಸಮೀಪದ ದಯಾನಂದ ಸಾಗರ್ ಆಸ್ಪತ್ರೆಗಳಿಗೆ ಭೇಟಿ ನೀಡಿ, ಆಡಳಿತ ಮಂಡಳಿಗಳ ಜತೆ ಮಾತುಕತೆ ನಡೆಸಿ ತಕ್ಷಣಕ್ಕೆ ಎರಡೂ ಆಸ್ಪತ್ರೆಗಳಲ್ಲಿ 660 ಬೆಡ್ ಗಳನ್ನು ಸಜ್ಜುಗೊಳಿಸಿದರು.

ಇವೆರಡೂ ಆಸ್ಪತ್ರೆಗಳನ್ನು ರಾಮನಗರ ಜಿಲ್ಲೆಯ ರೋಗಿಗಳಿಗೆ ಚಿಕಿತ್ಸೆ ನೀಡಲು ಗುರುತಿಸಲಾಗಿದೆ. ಜಿಲ್ಲೆಯ ರೋಗಿಗಳ ಸೇವೆಗೆ ಆಸ್ಪತ್ರೆಗಳ ವೈದ್ಯರು ಮತ್ತು ನರ್ಸ್ ಗಳ ಸೇವೆ ಲಭ್ಯವಾಗಲಿದೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ವೈದ್ಯ, ಆಶಾ ಕಾರ್ಯಕರ್ತೆಯರಿಗೆ ತಗುಲಿದ ಕೊರೊನಾ