Publish Date: Sun, 28 Jun 2020 (17:32 IST)
Updated Date: Sun, 28 Jun 2020 (17:33 IST)
ಮಹಾಮಾರಿ ಕೊರೊನಾ ನಿರ್ಮೂಲನೆಗಾಗಿ ಪ್ರಾರ್ಥಿಸಿ ರಾಜ್ಯದ ಸಚಿವರೊಬ್ಬರು ಹೋಮ ಮಾಡಿದ್ದಾರೆ.
ತೋಟಗಾರಿಕೆ, ರೇಷ್ಮೆ, ಪೌರಾಡಳಿತ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ದಂಪತಿ ನೇತೃತ್ವದಲ್ಲಿ ಸಕಲ ಜ್ವರ ನಿವಾರಣಾ ಧನ್ವಂತರಿ ಹೋಮವನ್ನು ಶ್ರದ್ಧಾಭಕ್ತಿಯಿಂದ ಕೆ.ಆರ್.ಪೇಟೆ ಪಟ್ಟಣದ ಭ್ರಮರಾಂಬಿಕ ಚೆನ್ನಮಲ್ಲಿಕಾರ್ಜುನಸ್ವಾಮಿ ದೇವಾಲಯದ ಆವರಣದಲ್ಲಿ ನಡೆಸಲಾಯಿತು .
ಕೊರೊನಾ ಸೇರಿದಂತೆ ಯಾವುದೇ ಬಗೆಯ ಪೀಡೆಗಳು, ಜ್ವರಗಳು, ದೇಹಭಾದೆಗಳು ಕಾಡದಂತೆ ಆರೋಗ್ಯ ಕರುಣಿಸುವಂತೆ ಲೋಕಕಲ್ಯಾಣಾರ್ಥವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಹೋಮ ಹವನವನ್ನು ನಡೆಸಿ ಪೂರ್ಣಾಹುತಿ ಸಲ್ಲಿಸಿ ಧನ್ವಂತರಿ ಹಾಗೂ ಪ್ರಕೃತಿಮಾತೆಗೆ ಪ್ರಾರ್ಥನೆ ಸಲ್ಲಿಸಲಾಯಿತು.