Select Your Language

Notifications

webdunia
webdunia
webdunia
webdunia

ಬ್ರೂಕ್ ಫೀಲ್ಡ್ ಆಸ್ಪತ್ರೆಗೆ ಭೇಟಿ ನೀಡಿದ ಡಿಸಿಎಂ ಡಿಕೆಶಿ,ಪರಮೇಶ್ವರ್

dk shivakumar

geetha

bangalore , ಶನಿವಾರ, 2 ಮಾರ್ಚ್ 2024 (14:20 IST)
ಬೆಂಗಳೂರು- ವೈಟ್ ಫೀಲ್ಡ್ ನ ಕುಂದಲಹಳ್ಳಿಯಲ್ಲಿ ಸ್ಫೋಟ ಸಂಭವಿಸಿರುವ ರಾಮೇಶ್ವರಂ ಕೆಫೆ ಬಳಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳ ಜತೆ ಶುಕ್ರವಾರ ರಾತ್ರಿ ಮಾತಾಡಿದರು. ಗೃಹ ಸಚಿವ ಡಾ ಜಿ ಪರಮೇಶ್ವರ, ಶಾಸಕಿ ಮಂಜುಳಾ ಲಿಂಬಾವಳಿ ಮತ್ತಿತರರು ಇದ್ದರು. ನಂತರ ಅವರು ಗಾಯಳುಗಳು ಚಿಕಿತ್ಸೆ ಪಡೆಯುತ್ತಿರುವ ಬ್ರೂಕ್ ಫೀಲ್ಡ್  ಆಸ್ಪತ್ರೆಗೆ ಭೇಟಿ ನೀಡಿದ್ದರು .
 
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ಸ್ಥಳಕ್ಕೆ ಎನ್ ಎಸ್ ಜಿ ಕಮಾಂಡೋ ಟೀಂ ಆಗಮಿಸಿದೆ.ಬಾಂಬ್ ನಿಷ್ಕ್ರಿಯ ದಳದ ಜೊತೆ ಎನ್ ಎಸ್ ಜಿ ಟೀಂ ಸ್ಥಳ‌ ಪರಿಶೀಲನೆ ನಡೆಸಿದೆ.ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಬಾಂಬ್ ಸ್ಫೋಟ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಪ್ರಮುಖ ದೇವಾಲಯ, ಮಾಲ್ ಗಳಲ್ಲಿ ಚೆಕ್ಕಿಂಗ್  ಮಾಡ್ತಿದ್ದಾರೆ.ಏಪೋರ್ಟ್ , ರೈಲು ನಿಲ್ದಾಣ, ಬಸ್ ನಿಲ್ದಾಣ  ನಗರ ಪ್ರಮುಖ ಸ್ಥಳಗಳಲ್ಲಿ ಪೊಲೀಸರ ಕಟ್ಟೆಚ್ಚರವಹಿಸಿದ್ದಾರೆ.
 
ಇನ್ನೂ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಗೃಹಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ.ಘಟನೆ ಬಗ್ಗೆ ಸಾಕಷ್ಟು ಕುರುಹುಗಳು ಸಿಕ್ಕಿವೆ .ಸಿಸಿಟಿವಿಯಲ್ಲಿ ಕೆಲವು ಸಾಕ್ಷ್ಯಗಳು ಸಿಕ್ಕಿವೆ.ಬಸ್ ನಲ್ಲಿ ಬಂದಿದ್ದ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.ಯಾವ ಕಾರಣಕ್ಕೂ ಸ್ಫೋಟದ ಆರೋಪಿಯನ್ನು ಬಿಡಲ್ಲ.ಘಟನೆ ಹಿಂದೆ ಯಾವ ಸಂಘಟನೆ ಇದೆ ಅಂತ ಈಗಲೇ ಹೇಳಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಮೇಶ್ವರ ಕೆಫೆ ಸ್ಫೋಟ ವಿಚಾರದಲ್ಲಿ ರಾಜಕೀಯ ಮಾಡ್ತಿಲ್ಲ-ವಿಜಯೇಂದ್ರ