Publish Date: Sat, 02 Mar 2024 (14:00 IST)
Updated Date: Sat, 02 Mar 2024 (14:04 IST)
ಬೆಂಗಳೂರು- ರಾಮೇಶ್ವರ ಕೆಫೆ ಸ್ಫೋಟ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡ್ತಿಲ್ಲ.ಜವಾಬ್ದಾರಿಯುತ ವಿಪಕ್ಷ ಆಗಿ ಸರ್ಕಾರಕ್ಕೆ ಸಹಕಾರ ಕೊಡೋದಾಗಿ ನಿನ್ನೆ ಹೇಳಿದ್ದೇವೆ ಆದ್ರೆ ಕಾಂಗ್ರೆಸ್ ಸಚಿವರ ಹೇಳಿಕೆಗಳನ್ನು ನೋಡಿದರೆ ಸರ್ಕಾರದ ಮೇಲೆ ಜನರಿಗೆ ನಂಬಿಕೆ ಬರಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.
ಇನ್ನೂ ಪಾಕ್ ಪರ ಘೋಷಣೆ ಪ್ರಕರಣದಲ್ಲಿ ಸಚಿವರ ಹೇಳಿಕೆಗಳು ಯಾವ ರೀತಿ ಇದ್ದವು?ನಾಲ್ಕೈದು ದಿನ ಆದರೂ ಎಫ್‌ಎಸ್‌ಎಲ್ ವರದಿ ಬಂದಿಲ್ಲ ಅಂತಿದ್ದಾರೆ.ಎಫ್‌ಎಸ್‌ಎಲ್ ವರದಿ ಬಂದಿಲ್ಲ ಅಂತ ಸಿಎಂ ಮೈಸೂರಲ್ಲಿ ಹೇಳಿದ್ದಾರೆ ಆದರೆ ನಮಗೆ ಬಂದ ಮಾಹಿತಿ ಪ್ರಕಾರ ಎಫ್‌ಎಸ್‌ಎಲ್ ವರದಿ ಬಂದಿದೆ ಆದ್ರೆ ಅದನ್ನು ಮುಚ್ಚಿ ಮತ್ತೊಂದು ಬೋಗಸ್ ವರದಿ ತಯಾರಿಸಲು ಸರ್ಕಾರ ಮುಂದಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಯಾವ್ಯಾವುದಕ್ಕೋ ಮೆಲುಕು ಹಾಕುವುದು ಬೇಡ.ಸಿಎಂ ಅವರಿಗೆ ನನ್ನ ಆಗ್ರಹ ಏನಂದ್ರೆ, ಇಂಥ ಘಟನೆಗಳಲ್ಲಿ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.ಬಿಜೆಪಿ ಅವಧಿಯ ಸ್ಫೋಟಗಳಿಗೂ ತುಷ್ಟೀಕರಣ ಕಾರಣ ಅಂತ ಹೇಳಲಿ ಎಂಬ ಸಿಎಂ ಹೇಳಿಕೆಗೆ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.