Select Your Language

Notifications

webdunia
webdunia
webdunia
webdunia

ಗೃಹ ಸಚಿವ ಪರಮೇಶ್ವರ್ ಮನೆಯಲ್ಲಿ ಹಾಲು ಕದ್ದು ಕುಡಿದ ಕೋತಿ!

Parameshwar
Photo Courtesy: Twitter
ಬೆಂಗಳೂರು: ಕೋತಿ ಎಲ್ಲಿ ಹೋದರೂ ಕೋತಿ ಬಿಡುತ್ತಾ ಎನ್ನುವುದಕ್ಕೆ ಇದೇ ಸಾಕ್ಷಿ. ಗೃಹ ಸಚಿವ ಜಿ. ಪರಮೇಶ್ವರ್ ಮನೆಯೊಳಗೆ ನುಗ್ಗಿದ ಕೋತಿ ಹಾಲು ಕುಡಿದು ಪರಾರಿಯಾಗಿದೆ.

ತುಮಕೂರಿನ ಸಿದ್ಧಾರ್ಥ ನಗರದಲ್ಲಿರುವ ಗೃಹ ಸಚಿವ ಜಿ. ಪರಮೇಶ್ವರ್ ಮನೆಯಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಇದನ್ನು ಗಮನಿಸಿದ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಕೋತಿ ಮನೆಯೊಳಗೇ ಮಾಡಿದ ಅವಾಂತರ ನೋಡಿ ತಮಾಷೆ ಮಾಡಿದ್ದಾರೆ.

ಜಿ. ಪರಮೇಶ್ವರ್ ಮನೆಯಲ್ಲಿ ಜನರಿಂದ ಅಹವಾಲು ಸ್ವೀಕರಿಸುತ್ತಿದ್ದರು. ಈ  ವೇಳೆ ಕೋತಿಯೊಂದು ಮನೆಯೊಳಗೆ ನುಗ್ಗಿದ್ದಲ್ಲದೆ ನೇರವಾಗಿ ಫ್ರಿಡ್ಜ್ ಬಾಗಿಲು ತೆಗೆದು ಹಾಲು ಕುಡಿದಿದೆ. ಇದನ್ನು ಗಮನಿಸಿ ಭದ್ರತಾ ಸಿಬ್ಬಂದಿಗಳು ಕೋತಿಯನ್ನು ಓಡಿಸಲು ಮುಂದಾಗಿದ್ದಾರೆ. ಆದರೆ ಸ್ವತಃ ಸಚಿವರು ತಡೆದಿದ್ದಾರೆ. ಬಳಿಕ ಕೋತಿ ಹಾಲಿನ ಪ್ಯಾಕೆಟ್ ಕಿತ್ತು ಮೆಟ್ಟಿಲ ಮೇಲೆ ಕುಳಿತು ಹಾಲು ಚಪ್ಪರಿಸಿ ಕುಡಿದ ಮೇಲೆ ಅಲ್ಲಿಂದ ಪರಾರಿಯಾಗಿದೆ.

ಬಿರು ಬೇಸಿಗೆಯ ಬೇಗೆ ಪ್ರಾಣಿ-ಪಕ್ಷಿಗಳೂ ತಟ್ಟಿದೆ. ಕುಡಿಯಲು ನೀರಿಲ್ಲದೇ ದಾಹವಾಗಿ ಮನೆಯೊಳಗೇ ಬಂದು ಹಾಲು ಕುಡಿಯುವ ಹಂತಕ್ಕೆ ಕೋತಿ ಬಂದಿದೆ. ಗೃಹ ಸಚಿವರ ಮನೆಯಲ್ಲಿಯೇ ಹಾಲು ಕಳ್ಳತನ ಮಾಡಿದ ಕೋತಿಗೆ ಭೇಷ್ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆ ಚುನಾವಣೆ ಬಗ್ಗೆ ಈ ಸುಳ್ಳು ಸುದ್ದಿ ನಂಬಬೇಡಿ