ಬೆಂಗಳೂರು: ರಾಜ್ಯದಲ್ಲಿ ರಸ್ತೆ ಗುಂಡಿಗಳ ಬಗ್ಗೆ ಸರ್ಕಾರ ತೀವ್ರ ಟೀಕೆಗೊಳಗಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ನಮ್ಮಲ್ಲಿ ಮಾತ್ರನಾ ರಸ್ತೆ ಗುಂಡಿಗಳು ಇರೋದು. ದೆಹಲಿಯಲ್ಲಿ ಮೋದಿ ಮನೆ ಎದುರೂ ರಸ್ತೆ ಗುಂಡಿಗಳಿವೆ. ನಾನೇ ತೋರಿಸ್ತೀನಿ ಎಂದಿದ್ದಾರೆ.
ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ನಡೆಯುತ್ತಿದೆ. ಪ್ರತಿನಿತ್ಯ 1000 ಗುಂಡಿಗಳನ್ನು ಮುಚ್ಚುವ ಕೆಲಸ ಜೆಬಿಎ ಕಡೆಯಿಂದ ನಡೆಯುತ್ತಿದೆ. ಇದನ್ನು ಐಟಿ ಕಂಪನಿಗಳು ತಿಳಿದುಕೊಳ್ಳಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇನ್ನು ರಸ್ತೆ ಗುಂಡಿಗಳನ್ನೇ ದೊಡ್ಡದಾಗಿ ಬಿಂಬಿಸುವ ಅಗತ್ಯವಿಲ್ಲ. ನಾನು ದೆಹಲಿಗೆ ಹೋಗಿದ್ದೆ. ದೆಹಲಿಯಲ್ಲಿ ಒಂದು ಸುತ್ತು ಎಲ್ಲಾ ಕಡೆ ಹೋಗಿದ್ದೆ. ನಿಮ್ಮ ವರದಿಗಾರರನ್ನು ದೆಹಲಿಗೆ ಕಳುಹಿಸಿ, ಅಲ್ಲಿ ಎಷ್ಟು ಕಡೆ ರಸ್ತೆ ಗುಂಡಿಗಳಿವೆ ನೋಡಲಿ. ಪ್ರಧಾನಿ ಮೋದಿ ಮನೆ ಮುಂದಿನ ರಸ್ತೆಯಲ್ಲಿ ಎಷ್ಟು ಗುಂಡಿಗಳಿವೆ ನೋಡಲಿ ಎಂದಿದ್ದಾರೆ.
ಇದು ಬರೀ ನಮ್ಮ ರಾಜ್ಯದ ಸಮಸ್ಯೆಯಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ರಸ್ತೆಗಳೇ ಇರುತ್ತಿರಲಿಲ್ಲ. ನಾವು ಈಗ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದೇವೆ. ಇದನ್ನು ಬೆಂಗಳೂರಿನ ದೊಡ್ಡದೊಡ್ಡ ಕಂಪನಿಗಳು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.