Publish Date: Sat, 08 Aug 2020 (21:52 IST)
Updated Date: Sat, 08 Aug 2020 (21:54 IST)
ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಬಿಜೆಪಿ ನಾಯಕರು ಟೀಕೆಗಳನ್ನು ಮುಂದುವರಿಸಿದ್ದಾರೆ.
ಕೊರೊನಾ ಸಮಯದಲ್ಲಿಯೂ ಟೀಕೆ ಮಾಡುತ್ತಿದ್ದ ವಿಪಕ್ಷಗಳಿಗೆ ಇದೀಗ ನೆರೆ ವಿಷಯದಲ್ಲಿಯೂ ಆರೋಪಗಳಿಗೆ ಮುಂದಾಗಿದ್ದಾರೆ.
ರಚನಾತ್ಮಕ ಸಲಹೆ, ಸೂಚನೆಗಳನ್ನು ಕೊಡುವುದನ್ನು ಬಿಟ್ಟು ರಾಜಕೀಯ ಮಾಡುತ್ತಾ ವಿಪಕ್ಷಗಳು ಕಾಲಹರಣ ಮಾಡುತ್ತಿವೆ.
ಹೀಗಂತ ಡಿಸಿಎಂ ಅಶ್ವತ್ಥನಾರಾಯಣ ಹೇಳಿದ್ದು, ಪ್ರಕೃತಿ ವಿಕೋಪ ಸಮಯದಲ್ಲಿಯೂ ವಿಪಕ್ಷದವರು ವಿರೋಧ ಮಾಡುತ್ತಿರೋದು ಸರಿಯಲ್ಲ ಎಂದಿದ್ದಾರೆ.
ಆಯಾ ಜಿಲ್ಲೆಗಳ ಜಿಲ್ಲಾ ಉಸ್ತುವಾರಿಗಳು ನೆರೆ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ ಎಂದು ಡಿಸಿಎಂ ಹೇಳಿದ್ದಾರೆ.