Publish Date: Sun, 29 Jul 2018 (15:42 IST)
Updated Date: Sun, 29 Jul 2018 (15:48 IST)
ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟಕ್ಕೆ ನನ್ನ ಬೆಂಬಲವಿಲ್ಲ. ಅಖಂಡ ಅಖಂಡ ಕರ್ನಾಟಕಕ್ಕಾಗಿ ಈ ಭಾಗದ ಜನರೇ ಸಾಕಷ್ಟು ಹೋರಾಟ ಮಾಡಿದ್ದಾರೆ ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ತಿಳಿಸಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟಕ್ಕೆ ನನ್ನ ಬೆಂಬಲವಿಲ್ಲ. ಅಲ್ಲದೇ ಅಖಂಡ ಕರ್ನಾಟಕ ಇರುವುದೇ ನನ್ನ ಪ್ರಮುಖ ಆಶಯವಾಗಿದೆ. ಅಖಂಡ ಅಖಂಡ ಕರ್ನಾಟಕಕ್ಕಾಗಿ ಉತ್ತರ ಕರ್ನಾಟಕ ಭಾಗದ ಜನರೇ ಸಾಕಷ್ಟು ಹೋರಾಟ ಮಾಡಿದ್ದಾರೆ. ಕನ್ನಡ ನಾಡು ನುಡಿ ನೆಲ ಜಲ ಸಂರಕ್ಷಣೆಗಾಗಿ ತ್ಯಾಗ ಬಲಿದಾನ ಮಾಡಿದ್ದಾರೆ. ನಾವು ಕೂಡ ಅಖಂಡ ಕರ್ನಾಟಕದ ಪರ ಇರುತ್ತೇವೆ. ಬಜೆಟ್ ನಲ್ಲಿ ನಮ್ಮ ಸರ್ಕಾರ ಉತ್ತರ ಕರ್ನಾಟಕಕ್ಕೆ ತಾರತಮ್ಯ ಮಾಡಿಲ್ಲ. ಈ ಬಗ್ಗೆ ನಾವು ಯಾವುದೇ ನಾವು ಚರ್ಚೆಗೂ ಸಿದ್ದ.
ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಬೆಲೆ ಕೊಡದೆ ಇರುವುದು ಒಳ್ಳೆಯದು. ರಾಜ್ಯದ ಮೈತ್ರಿ ಸರ್ಕಾರ ಎಲ್ಲವನ್ನೂ ಸಮಾನಾಗಿ ನೋಡುತ್ತದೆ. ಬಜೆಟ್ ನಲ್ಲಿ ಉ-ಕ ಗೆ ಯಾವುದೇ ಅನ್ಯಾಯವಾಗಿಲ್ಲ. ರಾಜ್ಯದ ಪ್ರತಿಯೊಂದು ಭಾಗವು ದೇಹದ ಒಂದೊಂದು ಅಂಗದಂತೆ. ಈ ಹಿನ್ನೆಲೆಯಲ್ಲಿ ರಾಜ್ಯದ ಯಾವುದೇ ಜಿಲ್ಲೆಗೆ ಅನ್ಯಾಯವಾದರೂ ಕೂಡ ಅದು ರಾಜ್ಯಕ್ಕೆ ಆದ ಅನ್ಯಾಯವಾಗುತ್ತದೆ. ಆದ್ದರಿಂದ ನಮ್ಮ ಸರ್ಕಾರದಲ್ಲಿ ರಾಜ್ಯದ ಯಾವುದೇ ಭಾಗಕ್ಕೂ ಅನ್ಯಾಯವಾಗುವುದಿಲ್ಲ ಎಂದರು.