Publish Date: Sun, 29 Jul 2018 (09:29 IST)
Updated Date: Sun, 29 Jul 2018 (09:30 IST)
ಕೊಚ್ಚಿ: ಶಬರಿಮಲೆ ಅಯ್ಯಪ್ಪ ಸ್ವಾಮಿಯ ಭಕ್ತ ನಾನು. ಅವನ ಆಶೀರ್ವಾದದಿಂದಲೇ ಮುಖ್ಯಮಂತ್ರಿಯಾದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.
ಕೊಚ್ಚಿಯಲ್ಲಿ ಜೆಡಿಎಸ್ ರಾಜ್ಯ ಸಮಿತಿ ತಮಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ ಕುಮಾರಸ್ವಾಮಿ ಈ ಹೇಳಿಕೆ ನೀಡಿದ್ದಾರೆ.
‘2005 ರಲ್ಲಿ ಶಬರಿಮಲೈಗೆ ಭೇಟಿ ನೀಡಿದ ಬಳಿಕ 2006 ರಲ್ಲಿ ಮುಖ್ಯಮಂತ್ರಿಯಾದೆ. ಈಗಲೂ ಎರಡನೇ ಬಾರಿ ಮುಖ್ಯಮಂತ್ರಿಯಾಗಲು ಅಯ್ಯಪ್ಪನ ಆಶೀರ್ವಾದವೇ ಕಾರಣ’ ಎಂದು ಸಿಎಂ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.