Webdunia - Bharat's app for daily news and videos

Install App

ಮಗಳ ತಾಳಿಯನ್ನೇ ಕಿತ್ತ ತಂದೆ! ಮುಂದೇನಾಯ್ತು?

Webdunia
ಮಂಗಳವಾರ, 21 ಡಿಸೆಂಬರ್ 2021 (08:49 IST)
ಮೈಸೂರು : ಸಿನಿಮಾ ಕಥೆಯ ಮಾದರಿ ಪ್ರೀತಿಸಿ ಮದುವೆಯಾದ ಮಗಳ ತಾಳಿ ಕಿತ್ತು ಹಾಕಿ, ಜುಟ್ಟು ಹಿಡಿದು ಎಳೆದೊಯ್ಯಲು ತಂದೆ ಯತ್ನಿಸಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.
 
ನಂಜನಗೂಡು ತಾಲೂಕು ಹರತಲೆ ಗ್ರಾಮದ ಯುವತಿ ಹಲ್ಲರೆ ಗ್ರಾಮದ ಮಹೇಂದ್ರ ಎಂಬವರನ್ನು ಕಳೆದ ಒಂದೂವರೆ ವರ್ಷದಿಂದ ಪ್ರೀತಿಸಿದ್ದರು. ನಂತರ ಡಿಸೆಂಬರ್ 8 ರಂದು ಮದುವೆಯಾಗಿದ್ದಾರೆ. ನಂತರ ನಂಜನಗೂಡಿನ ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ತಮ್ಮ ವಿವಾಹವನ್ನ ನೊಂದಾಯಿಸಿಕೊಳ್ಳಲು ಬಂದಿದ್ದಾರೆ.

ನೋಂದಣಿ ಪ್ರಕ್ರಿಯೆ ಮುಗಿಸಿ ಕಚೇರಿಯಿಂದ ಹೊರ ಬರುತ್ತಿದ್ದಂತೆಯೇ ಯುವತಿ ತಂದೆ ಬಸವರಾಜ ನಾಯ್ಕ್ ಪ್ರತ್ಯಕ್ಷವಾಗಿ ಮಗಳ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಹಾಕಿ ಜುಟ್ಟು ಹಿಡಿದು ಮನೆಗೆ ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ.

ಈ ವೇಳೆ ಸಾರ್ವವನಿಕರು ಮಧ್ಯೆ ಪ್ರವೇಶಿಸಿ ಯುವತಿಯನ್ನು ರಕ್ಷಿಸಿದ್ದಾರೆ ಮತ್ತು ಯುವತಿ ತನ್ನ ತಂದೆಯಿಂದಲೇ ತನಗೆ ರಕ್ಷಣೆ ಬೇಕೆಂದು ನಂಜನಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿ ನನ್ನ ರೋಲ್ ಮಾಡೆಲ್ ಎಂದಿದ್ದಕ್ಕೆ ಲಕ್ಷ ಸಂಬಳ ತರುವ ಹುಡುಗನನ್ನೇ ನಂಗಿವ ಬೇಡ ಎಂದ್ಳು ಯುವತಿ

ವಿಶ್ವದಾದ್ಯಂತ ಸಂಚಲನ ಮೂಡಿಸಿದ ಟಾಕ್ಸಿಕ್‌: ಮುಂಗಡ ಟಿಕೆಟ್ ಬುಕಿಂಗ್‌ಗೆ ಮುಗಿಬಿದ್ದ ಅಭಿಮಾನಿಗಳು

ಶಾಲೆ ವೀಕ್ಷಣೆಗೆ ಬಂದ ಸಿಜೆಪಿ ನಾಯಕ ಆಶುತೋಷ್ ರಾಂಕಾರನ್ನು ಕಲ್ಲು, ದೊಣ್ಣೆಯಿಂದ ಹೊಡೆದು ಓಡಿಸಿದ ಗ್ರಾಮಸ್ಥರು Video

ನಾಗೇಂದ್ರ ರಾಜೀನಾಮೆ ಕೊಡದಿದ್ರೆ ಸದನ ಮುಗಿನದ ನಂತರವೂ ಹೋರಾಟ ಮಾಡ್ತೀವಿ: ವಿಜಯೇಂದ್ರ

ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಫೈಟ್ ಜೋರು: ಕಪ್ಪು ಟಿಶರ್ಟ್ ಧರಿಸಿ ವಿಧಾನಸೌಧಕ್ಕೆ ನುಗ್ಗಲು ಯತ್ನ Video

ಮುಂದಿನ ಸುದ್ದಿ
Show comments