Webdunia - Bharat's app for daily news and videos

Install App

ಅ. 28ಕ್ಕೆ ದತ್ತಪೀಠ ಚಲೋ

Webdunia
ಭಾನುವಾರ, 7 ಅಕ್ಟೋಬರ್ 2018 (18:05 IST)
ಹಿಂದುಗಳಿಗೆ ಸಂಪೂರ್ಣ ದತ್ತ ಪೀಠ ಒಪ್ಪಿಸಲು ಆಗ್ರಹಿಸಿ 28ಕ್ಕೆ ದತ್ತಪೀಠ ಚಲೋ ಹಮ್ಮಿಕೊಳ್ಳಲಾಗಿದೆ. ಹೀಗಂತ ಶ್ರೀರಾಮಸೇನೆ ಮುಖ್ಯಸ್ಥ ಹೇಳಿದ್ದಾರೆ.

ದಾವಣಗೆರೆಯಲ್ಲಿ ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದು, ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೆ.25ಕ್ಕೆ ಹೋರಾಟ ನಡೆಯಲಿದೆ ಎಂದರು.

ಇನ್ನು ಶಬರಿಮಲೈಗೆ ಮಹಿಳೆಯರ ಪ್ರವೇಶ ಹಿನ್ನಲೆ ಧಾರ್ಮಿಕ ಸೂಕ್ಷ್ಮತೆಗೆ ವ್ಯತಿರಿಕ್ತ ತೀರ್ಪು ಬಂದಿದೆ ಎಂದ ಅವರು,
ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಧಾರ್ಮಿಕ ಆಚರಣೆಗೆ ಅನುವು ಮಾಡಲಿ ಎಂದು ಆಗ್ರಹಿಸಿದರು.

ಗೌರಿ ಲಂಕೇಶ್ ಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ್ದು, ಸರ್ಕಾರಕ್ಕೆ ಹಿಂದುಗಳು ಟಾರ್ಗೆಟ್ ಆಗಿದ್ದಾರೆ. ಹತ್ಯೆಯಾದ ದಿನ ಆರ್ ಎಸ್ ಎಸ್ ಕೈವಾಡ ಇದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಗಾಂಧಿಯವರೆ ನೀವೇನು ಡಿವೈಎಸ್ಪಿನಾ? ರಾಹುಲ್ ಗಾಂಧಿ ಅಣತೆಯಂತೆ ಸರ್ಕಾರ ಹಿಂದುಗಳನ್ನು ಟಾರ್ಗೆಟ್ ಮಾಡಿದೆ.

ಎಸ್ ಐಟಿಯಿಂದ ಹಿಂದೂ ಸಂಘಟನೆಗಳ ಸಿಕ್ಕಿಸುವ ಹುನ್ನಾರ ನಡೆದಿದೆ. ಆರೋಪಿಗೆ ಚಿತ್ರಹಿಂಸೆ ನೀಡಿ ತಪ್ಪು ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ. 25 ಲಕ್ಷ  ರೂ. ಆಮಿಷ ಮೂಲಕ ದಿಕ್ಕು ತಪ್ಪಿಸುವ ಹುನ್ನಾರ ನಡೆದಿದೆ.
ಆಮೀಷ ನೀಡಿದ ಅಧಿಕಾರಿಗಳನ್ನು ವಜಾ ಮಾಡಲಿ ಎಂದು ದಾವಣಗೆರೆಯಲ್ಲಿ ಪ್ರಮೋದ್ ಮುತಾಲಿಕ್ ಆಗ್ರಹ ಮಾಡಿದರು.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments