Select Your Language

Notifications

webdunia
webdunia
webdunia
webdunia

ಸಾಂಸ್ಕ್ರತಿಕ ನಗರಿ ಮೈಸೂರಿನ ದೇವರಾಜ ಅರಸ್ ರಸ್ತೆಯಲ್ಲಿರುವ ದರ್ಗಾ ವಿವಾದ

ಸಾಂಸ್ಕ್ರತಿಕ ನಗರಿ ಮೈಸೂರಿನ ದೇವರಾಜ ಅರಸ್ ರಸ್ತೆಯಲ್ಲಿರುವ ದರ್ಗಾ ವಿವಾದ
mysore , ಶುಕ್ರವಾರ, 10 ಸೆಪ್ಟಂಬರ್ 2021 (20:32 IST)
ಸಾಂಸ್ಕ್ರತಿಕ ನಗರಿ ಮೈಸೂರಿನ ದೇವರಾಜ ಅರಸ್ ರಸ್ತೆಯಲ್ಲಿರುವ ದರ್ಗಾ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ದರ್ಗಾ ವಿವಾದ ಮುಂದಿಟ್ಟು  ತೊಡೆ ತಟ್ಟಿ ರಾಜಕೀಯ ಹೋರಾಟಕ್ಕೆ ನಿಂತಿದ್ದಾರೆ. ಮೈಸೂರಿನ ಕೆಡಿಪಿ ಮೀಟಿಂಗ್ ನಲ್ಲಿ ಜಿಲ್ಲಾಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಂಸದ ಪ್ರತಾಪ್ ಸಿಂಹ, ದರ್ಗಾಗಳನ್ನು ಬಿಟ್ಟು ದೇವಸ್ಥಾನಗಳನ್ನು ಏಕೆ ಟಾರ್ಗೆಟ್ ಮಾಡಿದ್ದೀರಾ. ಈ ತನಕ ಎಷ್ಟು ಅನಧೀಕೃತ ದರ್ಗಾ ತೆರವು ಮಾಡಿದ್ದೀರಾ ಅಂತ ಖಡಕ್ ಆಗಿ ಪ್ರಶ್ನಿಸಿದರು. ಹಿಂದೂಗಳು ಮಚ್ಚು ಲಾಂಗು ಹಿಡಿಯೋದಿಲ್ಲ ಅಂತ ದೇವಸ್ಥಾನಗಳನ್ನು ಟಾರ್ಗೆಟ್ ಮಾಡುತ್ತಿದ್ದೀರಾ ಅಂತ ಪ್ರತಾಪ್ ಸಿಂಹ ಜಿಲ್ಲಾಡಳಿತಕ್ಕೆ ಸರಣಿ ಪ್ರಶ್ನೆಗಳ ಸುರಿಮಳೈಗೈಯ್ದರು. 1975 ರ ತನಕ ದೇವರಾಜ ಅರಸ್ ರಸ್ತೆಯನ್ನು ಶನಿದೇವರ ಗುಡಿ ಬೀದಿ ಅಂತ ಕರೆಯಲಾಗುತ್ತಿತ್ತು. ರಸ್ತೆ ಅಗಲೀಕರಣದ ವೇಳೆ ದರ್ಗಾ ಪಕ್ಕದಲ್ಲಿದ್ದ ಶನಿದೇವರ ಗುಡಿಯನ್ನು ಸ್ಥಳಾಂತರ ಮಾಡಲಾಯಿತು. ಆದರೆ ದರ್ಗಾ ಹಾಗೆ ಉಳಿಯಿತು. ಅಲ್ಲಿರುವುದು ಅನಧೀಕೃತ ದರ್ಗಾವಾಗಿದ್ದು, ಕೂಡಲೇ ತೆರವು ಮಾಡಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ಆದರೆ ಇದೇ ವಿಚಾರವಾಗಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಬೇರೆಯದೇ ವಾದ ಮಾಡುತ್ತಾರೆ. ದೇವರಾಜ್ ಅರಸ್ ರಸ್ತೆಯ ಮನೆಯೊಳಗೆ ಈ ದರ್ಗಾವಿತ್ತು. ರಸ್ತೆ ಅಗಲೀಕರಣದ ವೇಳೆ ದರ್ಗಾ ರಸ್ತೆಗೆ ಬಂದಿದೆ ಎನ್ನುತ್ತಾರೆ. ಫುಟ್ ಪಾತ್ ಆವರಿಸಿಕೊಂಡಿರುವ ದರ್ಗಾ ತೆರವು ಮಾಡಬೇಕು ಅಂತ ಬಿಜೆಪಿ ಒತ್ತಾಯಿಸಿದ್ರೆ, ದರ್ಗಾ ತೆರವು ಮಾಡಲು ಮುಂದಾದ್ರೆ ನಾವೇನು ಬಳೆ ತೊಟ್ಟು ಕೂರುತ್ತೇವಾ ಅಂತಾರೆ ಕಾಂಗ್ರೆಸಿಗರು ಕೇಸರಿ ಪಾಳೆಯಕ್ಕೆ ಸವಾಲು ಹಾಕಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಜೆಪಿ ನಗರದ ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ ಕರೋನಾ ನಿವಾರಣೆಗೆ ವಿಶೇಷ ಆಲಂಕಾರ ಹಾಗೂ ಪೂಜೆ